ಕಲಬುರಗಿಯಲ್ಲಿ ಸಿಲಿಂಡರ್ ಸ್ಫೋಟ, 10 ಜನರಿಗೆ ಗಾಯ

76

ಪ್ರಜಾಸ್ತ್ರ ಸುದ್ದಿ

ಕಲಬುರಗಿ: ನಗರದ ಸಪ್ತಗಿರಿ ಆರೆಂಜ್ ಹೋಟೆಲ್ ನಲ್ಲಿ ಶುಕ್ರವಾರ ಮುಂಜಾನೆ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ 10 ಜನರು ಗಾಯಗೊಂಡ ಘಟನೆ ನಡೆದಿದೆ. ಕೆಲವರು ಹೊರಗೆ ಓಡಿ ಬಂದಿದ್ದಾರೆ.

ಘಟನೆಯಲ್ಲಿ ಇಬ್ಬರು ಸ್ಥಿತಿ ಗಂಭೀರವಾಗಿದೆ. 8 ಜನರನ್ನು ಜಿಮ್ಸ್ ನ ಸಾಮಾನ್ಯ ವಾರ್ಡ್ ಗೆ, ಇಬ್ಬರನ್ನು ಜಿಮ್ಸ್ ನ ಟ್ರಾಮಾ ಸೆಂಟರ್ ಗೆ ದಾಖಲಿಸಲಾಗಿದೆ. ಬೆಳಗಿನ ಜಾವ ಸುಮಾರು 6.10ರ ಸಮಯದಲ್ಲಿ ಈ ಘಟನೆ ನಡೆದಿದೆ. ಅಗ್ನಿಶಾಮಕ ಸಿಬ್ಬಂದಿ ಎಲ್ಲರನ್ನು ರಕ್ಷಿಸುವ ಕೆಲಸ ಮಾಡಿದರು.

ಬೆಳಗಿನ ಉಪಹಾರ ಸಿದ್ಧತೆ ಮಾಡುತ್ತಿದ್ದವರು ಗಾಯಗೊಂಡಿದ್ದಾರೆ. ಗ್ರಾಹಕರು ಇಲ್ಲದ ಪರಿಣಾಮ ಹೆಚ್ಚಿನ ಅನಾಹುತ ಸಂಭವಿಸಿಲ್ಲವೆಂದು ತಿಳಿದು ಬಂದಿದೆ. ಈ ಕುರಿತು ತನಿಖೆ ನಡೆಯುತ್ತಿದೆ.




Leave a Reply

Your email address will not be published. Required fields are marked *

error: Content is protected !!