ಟಿ-20 ಮಾದರಿ ಕ್ರಿಕೆಟಿಗೂ ವಿದಾಯ ಹೇಳಿದ ವಾರ್ನರ್

78

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಐಸಿಸಿ ಟಿ-20 ವರ್ಲ್ಡ್ ಕಪ್ ಟೂರ್ನಿಯಿಂದ ಆಸ್ಟ್ರೇಲಿಯಾ ಹೊರ ಬಿದ್ದಿದೆ. ಸೂಪರ್ 8 ಹಂತದಲ್ಲಿ ವೈಫಲ್ಯ ಕಂಡ ಆಸೀಸ್ ಪಡೆಗೆ ನಿರಾಸೆಯಾಗಿದೆ. ಇದರ ನಡುವೆ ಆಸೀಸ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ 37 ವರ್ಷದ ಡೇವಿಡ್ ವಾರ್ನರ್ ಟಿ-20 ಮಾದರಿಯ ಕ್ರಿಕೆಟ್ ಗೂ ವಿದಾಯ ಹೇಳಿದ್ದಾರೆ.

ಇದೆ ಜನವರಿಯಲ್ಲಿ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದರು. ಈಗ ಟಿ-20 ಕ್ರಿಕೆಟಿಗೂ ನಿವೃತ್ತಿ ಘೋಷಿಸುವ ಮೂಲಕ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಹೇಳಿದಂತಾಗಿದೆ. 110 ಟಿ-20 ಪಂದ್ಯಗಳಿಂದ 3,277 ರನ್ ಗಳಿಸಿದ್ದಾರೆ.

ಆಟ ಹೊರತುಪಡಿಸಿ ಭಾರತೀಯ ಚಿತ್ರರಂಗದ ಹಾಡುಗಳಿಗೆ ರೀಲ್ಸ್, ಡ್ಯಾನ್ಸ್, ಆ್ಯಕ್ಟಿಂಗ್ ಮೂಲಕ ಎಲ್ಲರ ಮನಸ್ಸು ಗೆದ್ದಿದ್ದಾರೆ. ಈ ಮೂಲಕ ಭಾರತೀಯರಿಗೆ ಮತ್ತಷ್ಟು ಹತ್ತಿರವಾದ ವಿದೇಶಿ ಕ್ರಿಕೆಟಿಗರ ಸಾಲಿನಲ್ಲಿ ಡೇವಿಡ್ ವಾರ್ನರ್ ಸಹ ಇದ್ದಾರೆ.




Leave a Reply

Your email address will not be published. Required fields are marked *

error: Content is protected !!