115 ವರ್ಷದ ನಂತ್ರ ಜಾತ್ರೆ: ರಸ್ತೆ ರಿಪೇರಿಗಾಗಿ ವಿನೂತನ ಪ್ರತಿಭಟನೆ

364

ಹಾವೇರಿ: ಫೆಬ್ರವರಿ 21 ರಿಂದ 28ರ ವರೆಗೂ ನಗರದ ಪ್ರಸಿದ್ಧ ದ್ಯಾಮವ್ವದೇವಿ ಜಾತ್ರಾ ಮಹೋತ್ಸವ ನಡೆಯಲಿದೆ. ಹೀಗಾಗಿ ನಗರದ ರಸ್ತೆಗಳನ್ನ ರಿಪೇರಿ ಮಾಡಿ ಎಂದು ಆಗ್ರಹಿಸಿ ಸ್ಥಳೀಯರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ನಗರದ ಕಲ್ಲುಮಂಟಪ ರಸ್ತೆಯಲ್ಲಿ ಸಾರ್ವಜನಿಕರು ಸಸಿ ನೆಡುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ಮಾಡಿ, ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಸುಮಾರ 115 ವರ್ಷಗಳ ನಂತರ ಜರುಗುವ ಗ್ರಾಮ ದೇವಿ ಹಬ್ಬಕ್ಕೆ 2 ರಿಂದ 3 ಲಕ್ಷ ಜನ ಭಕ್ತರು ಬರುವ ಸಂಭವವಿದೆ. ನಗರದ ಬಹುತೇಕ ರಸ್ತೆಗಳು ತಗ್ಗು ಗುಂಡಿಗಳಿಂದ ಕೊಡಿದ್ದು,  ಜಾತ್ರೆ ಸಮಯದಲ್ಲಿ ಸಮಸ್ಯೆಯಾಗುತ್ತೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಎಷ್ಟು ಹೇಳಿದ್ರೂ ಕ್ಯಾರೆ ಅಂತಿಲ್ಲವೆಂದು, ಸ್ಥಳೀಯರು ರಸ್ತೆ ಮಧ್ಯದಲ್ಲಿಯೇ ಸಸಿ ನೆಟ್ಟು, ರಸ್ತೆ ದುರಸ್ತಿಗೆ ಆಗ್ರಹಿಸಿದ್ದಾರೆ.

ಈ ವೇಳೆ ಶಾಹಿದ ದೇವಿಹೂಸೂರ, ಬಾಬಣ್ಣ ಗಳಗನಾಥ. ಸಿದ್ದರಾಜ ಜಾಬಿನ, ಅಮೀರ ಜಾನ ಬೇಪಾರಿ, ಶಿವು ಆನವಟ್ಟಿ, ಇರ್ಶಾದ ಬಸನಾಳ, ರಾಜು ಆನವಟ್ಟಿ ಸೇರಿ ಅನೇಕರು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!