‘ರಾಬರ್ಟ್ ದರ್ಶನ’ಕ್ಕೆ ಡೇಟ್ ಫಿಕ್ಸ್!

336

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಕರೋನಾ ಲಾಕ್ ಡೌನ್ ನಿಂದಾಗಿ ಎಲ್ಲವೂ ಬಂದ್ ಆಗಿ ಹೋಯ್ತು. ಈಗ ನಿಧಾನವಾಗಿ ಶುರುವಾಗ್ತಿವೆ. ಹಾಗೇ ಚಿತ್ರ ಮಂದಿರಗಳು ಸಹ ಓಪನ್ ಆಗಿದ್ದು, ಪ್ರೇಕ್ಷಕರು ಬರಲು ಶುರು ಮಾಡಿದ್ದಾರೆ. ಹೀಗಾಗಿ ಬಿಗ್ ಬಜೆಟ್ ಚಿತ್ರಗಳು ರಿಲೀಸ್ ಗೆ ಪ್ಲಾನ್ ನಡೆಸಿವೆ.

ಡಿ ಬಾಸ್ ದರ್ಶನ ನಟನೆಯ ರಾಬರ್ಟ್ ಚಿತ್ರ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು ಸುಳ್ಳಲ್ಲ. ಇವರ ಅಭಿಮಾನಿಗಳು ಸಿನಿಮಾ ನೋಡಲು ಕಾಯುತ್ತಿದ್ದಾರೆ. ರಾಬರ್ಟ್ ರಿಲೀಸ್ ಆದ್ರೆ ಸಾಕು ಹಬ್ಬ ಮಾಡೋಣ ಅಂತಿದ್ದಾರೆ. ಅಂತಹ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಇಲ್ಲಿದೆ ನೋಡಿ.

ರಾಬರ್ಟ್ ಚಿತ್ರವನ್ನ ಡಿಸೆಂಬರ್ ಅಂತ್ಯಕ್ಕೆ ಬಿಡುಗಡೆಯ ಪ್ಲಾನ್ ಇತ್ತು. ಆದ್ರೆ, ಇನ್ನೂ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಥಿಯೇಟರ್ ಕಡೆ ಮುಖ ಮಾಡ್ತಿಲ್ಲ. ಹೀಗಾಗಿ ಏಪ್ರಿಲ್ 2ಕ್ಕೆ ರಾಬರ್ಟ್ ರಿಲೀಸ್ ಮಾಡಲಿದ್ದಾರೆ ಅನ್ನೋದು ಮಾತುಗಳು ಕೇಳಿ ಬರ್ತಿವೆ. ಸೋ, ದರ್ಶನ ಫ್ಯಾನ್ಸ್ ಇನ್ನು ನಾಲ್ಕು ತಿಂಗಳು ಕಾಯಲೇಬೇಕು.




Leave a Reply

Your email address will not be published. Required fields are marked *

error: Content is protected !!