ದೇಶದಲ್ಲಿ ಬಿಸಿಗಾಳಿಗೆ ನಾಲ್ಕೇ ತಿಂಗಳಲ್ಲಿ 110 ಜನರ ಸಾವು

82

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಈ ವರ್ಷದ ಬೇಸಿಗೆ ಇಡೀ ಭಾರತವನ್ನು ಹೈರಾಣು ಮಾಡಿದೆ. ದೇಶದ ತುಂಬಾ ಸರ್ವಕಾಲಿಕ ದಾಖಲೆಯ ತಾಪಮಾನ ಕಂಡು ಬಂದಿದೆ. ಹೀಗಾಗಿ ಸಾಕಷ್ಟು ಸಾವು ನೋವು ಸಂಭವಿಸಿವೆ. ಕೇಂದ್ರದ ಆರೋಗ್ಯ ಸಚಿವಾಲಯದ ಪ್ರಕಾರ ಈ ವರ್ಷದ ಬೇಸಿಗೆ ಬಿಸಿಲಿಗೆ 110 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಈ ಬಗ್ಗೆ ಗುರುವಾರ ವರದಿ ಬಿಡುಗಡೆ ಮಾಡಿದ್ದು, ಮಾರ್ಚ್ 1ರಿಂದ ಜೂನ್ 18ರ ನಡುವೆ ಬಿಸಿಗಾಳಿಗೆ ದೇಶದಲ್ಲಿ 110 ಮಂದಿ ಮೃತಪಟ್ಟಿದ್ದಾರೆ. 40 ಸಾವಿರಕ್ಕೂ ಹೆಚ್ಚು ಮಂದಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು 36 ಮಂದಿ ಮೃತಪಟ್ಟಿದ್ದಾರೆ. ನಂತರದ ಸ್ಥಾನದಲ್ಲಿ ಬಿಹಾರ, ರಾಜಸ್ಥಾನ್ ಹಾಗೂ ಒಡಿಶಾ ರಾಜ್ಯಗಳಿವೆ.

ಇದಕ್ಕೆ ಸಂಬಂಧಿಸಿದಂತೆ ಎಲ್ಲ ರಾಜ್ಯಗಳಿಂದ ಅಂತಿಮ ವರದಿ ಸಲ್ಲಿಕೆಯಾಗಿಲ್ಲ. ಹೀಗಾಗಿ ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.




Leave a Reply

Your email address will not be published. Required fields are marked *

error: Content is protected !!