ಆಸೀಸ್ ಚುಟುಕು ಜಗತ್ತಿನ ಚಾಂಪಿಯನ್ಸ್

257

ಪ್ರಜಾಸ್ತ್ರ ಕ್ರೀಡಾಸುದ್ದಿ

ದುಬೈ: ಭಾನುವಾರ ನಡೆದ ಐಸಿಸಿ ಟಿ-20 ವರ್ಲ್ಡ್ ಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಡುವೆ ನಡೆದ ಪಂದ್ಯದಲ್ಲಿ ಆಸೀಸ್ ಗೆದ್ದು ಬೀಗಿದೆ. ಈ ಮೂಲಕ ಮೊದಲ ಬಾರಿಗೆ ಟಿ-20 ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ.

ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪಿಂಚ್, ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ವಿಲಿಯಮ್ಸನ್ ಟೀಂ, 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 172 ರನ್ ಗಳಿಸಿತು. ಕ್ಯಾಪ್ಟನ್ ಕೇನ್ ವಿಲಿಯಮ್ಸನ್ ಭರ್ಜರಿ 85 ರನ್ ಗಳಿಸಿ ಗೌರವಯುತ ರನ್ ಕಲೆ ಹಾಕುವಲ್ಲಿ ಕಾರಣರಾದರು. ಇದರಲ್ಲಿ 3 ಸಿಕ್ಸ್, 10 ಫೋರ್ ಗಳಿದ್ದವು.

ಗುಪ್ಟಿಲ್ 28, ಫಿಲ್ಸ್ 18 ರನ್ ಬಿಟ್ಟರೆ ಉಳಿದವರು ಹೆಚ್ಚು ರನ್ ಗಳಿಸಲಿಲ್ಲ. ಆಸ್ಟ್ರೇಲಿಯಾ ಪರ ಜೋಶ್ ಹಝಲ್ ವುಡ್ 3 ವಿಕೆಟ್ ಪಡೆದು ಮಿಂಚಿದರು. ಜಂಪಾ 1 ವಿಕೆಟ್ ಪಡೆದ.

172 ರನ್ ಚೇಸ್ ಮಾಡಿದ ಪಿಂಚ್ ಟೀಂ ಆರಂಭದಲ್ಲಿ ಆಘಾತ ಅನುಭವಿಸಿತು. 15 ರನ್ ಗಳಿಸುವಷ್ಟರಲ್ಲಿ ನಾಯಕ ಪಿಂಚ್ 5 ರನ್ ಗೆ ಔಟ್ ಆದರು. ಆದರೆ, ಡೇವಿಡ್ ವಾರ್ನರ್ ಅಬ್ಬರಿಸಿ 53 ರನ್ ಗಳಿಸಿದರು. ಇದರಲ್ಲಿ 3 ಸಿಕ್ಸ್, 4 ಫೋರ್ ಇದ್ದವು. ಇನ್ನು ಮಿಚಲ್ ಮಾರ್ಸ್ ಭರ್ಜರಿ 77 ರನ್ ಭಾರಿಸಿ ಗೆಲುವಿಗೆ ಕಾರಣನಾದ. 4 ಸಿಕ್ಸ್, 6 ಫೋರ್ ಬಾರಿಸಿದ. ಮ್ಯಾಕ್ಸ್ ವೆಲ್ 28 ರನ್ ಗಳಿಸಿದ. ನ್ಯೂಜಿಲೆಂಡ್ ಪರ ಬೋಲ್ಡ್ 2 ವಿಕೆಟ್ ಪಡೆದ. ಅಂತಿಮವಾಗಿ ಆಸ್ಟ್ರೇಲಿಯಾ 8 ವಿಕೆಟ್ ಗಳಿಂದ ಭರ್ಜರಿ ಗೆಲುವು ಸಾಧಿಸಿ, ಟಿ-20 2021 ವರ್ಲ್ಡ್ ಕಪ್ ಎತ್ತಿ ಹಿಡಿಯಿತು. ನ್ಯೂಜಿಲೆಂಡ್ ರನರ್ ಅಪ್ ಆಯಿತು.




Leave a Reply

Your email address will not be published. Required fields are marked *

error: Content is protected !!