ಸೆಮಿ ಫೈನಲ್ ಗೆ ಲಗ್ಗೆ ಇಟ್ಟ ದಕ್ಷಿಣ ಆಫ್ರಿಕಾ

93

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಐಸಿಸಿ ಟಿ-20 ವರ್ಲ್ಡ್ ಕಪ್ ಟೂರ್ನಿಯ ಸೂಪರ್ 8 ಪಂದ್ಯಗಳಲ್ಲಿ ಇಂದು ನಡೆದ ಸೌತ್ ಆಫ್ರಿಕಾ ಹಾಗೂ ವೆಸ್ಟ್ ವಿಂಡೀಸ್ ನಡುವಿನ ಪಂದ್ಯದಲ್ಲಿ ಸೌತ್ ಆಫ್ರಿಕಾ ಗೆದ್ದು ಆತಿಥೇಯ ತಂಡ ವಿಂಡೀಸ್ ಅನ್ನು ಹೊರ ಹಾಕಲಾಯಿತು. ಅತ್ತ ಅಮೆರಿಕ ಸಹ ಹೊರ ಬಿದ್ದಿದ್ದು ಆತಿಥೇಯ ವಹಿಸಿಕೊಂಡ ದೇಶದ ತಂಡಗಳೇ ಟೂರ್ನಿಯಿಂದ ಹೊರ ಬಿದ್ದಿವೆ.

ನಾರ್ತ್ ಸೌಂಡ್ ನಲ್ಲಿರುವ ವಿವ್ ರಿಚರ್ಡ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ವಿಂಡೀಸ್ 8 ವಿಕೆಟ್ ನಷ್ಟಕ್ಕೆ 135 ರನ್ ಬಾರಿಸಿತು. ಚೇಸ್ ಹೊಡೆದ 52 ರನ್ ಗರಿಷ್ಟವಾಗಿದೆ. ಸೌತ್ ಆಫ್ರಿಕಾ ಪರ ಟರ್ಬೈಜ್ ಶಮಿಸಿ 3 ವಿಕೆಟ್ ಪಡೆದು ಮಿಂಚಿದರು. ಜಾನ್ಸನ್, ಮಾರ್ಕಮ್, ಕೇಶವ್ ಮಹಾರಾಜ್, ರಬಡಾ ತಲಾ 1 ವಿಕೆಟ್ ಪಡೆದರು.

ಈ ಸ್ಕೋರ್ ಚೇಸ್ ಮಾಡಿದ ಸೌತ್ ಆಫ್ರಿಕಾ 2 ಓವರ್ ಗಳಲ್ಲಿ 2 ವಿಕೆಟ್ ಗೆ 15 ರನ್ ಗಳಿಸಿದ್ದಾಗ ಮಳೆ ಸುರಿಯಿತು. ಇದರಿಂದಾಗಿ 17 ಓವರ್ ಗೆ ಇಳಿಸಿ 123 ರನ್ ಗುರಿ ನೀಡಲಾಯಿತು. ಆಫ್ರಿಕಾ ಪಡೆ ಛಲ ಬಿಡದೆ ಹೋರಾಟ ಮಾಡಿ 16.1 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 124 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ಸ್ಟುಬ್ಸ್ 29, ಕಾಲ್ಸನ್ 22, ಮಾರ್ಕ್ ಜಾನ್ಸನ್ 21 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ವಿಂಡೀಸ್ ಪರ ರೋಸ್ಟನ್ 3, ರಸಲ್ ಹಾಗೂ ಜೋಶಪ್ ತಲಾ 2 ವಿಕೆಟ್ ಪಡೆದು ಮಿಂಚಿದರು.




Leave a Reply

Your email address will not be published. Required fields are marked *

error: Content is protected !!