ಅಫ್ಗನ್ ಮಣಿಸಿದ ಭಾರತ

106

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಕಿಂಗ್ಸಸ್ಟನ್: ಐಸಿಸಿ ಟಿ-20 ವರ್ಲ್ಡ್ ಕಪ್ ನ ಸೂಪರ್ 8 ಪಂದ್ಯದಲ್ಲಿ ಗುರುವಾರ ಸಂಜೆ ನಡೆದ ಅಫ್ಗನ್ ವಿರುದ್ಧದ ಪಂದ್ಯದಲ್ಲಿ ಭಾರತ 47 ರನ್ ಗಳ ಅಂತರದಿಂದ ಜಯ ಗಳಿಸಿದೆ. ಇದರೊಂದಿಗೆ ಟೀಂ ಇಂಡಿಯಾ ಗೆಲುವಿನ ಓಟ ಮುಂದುವರೆದಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರೋಹಿತ್ ಶರ್ಮಾ ಪಡೆ ಆರಂಭಿಕ ಆಘಾತ ಎದುರಿಸಿತು. ಶರ್ಮಾ 8, ಕೊಹ್ಲಿ 24, ಪಂತ್ 20 ರನ್ ಗಳಿಗೆ ಔಟ್ ಆದರು. ಇನ್ನೊಂದು ಕಡೆ ಭರ್ಜರಿ ಬ್ಯಾಟ್ ಬೀಸಿದ ಸೂರ್ಯಕುಮಾರ್ ಯಾದವ್ 28 ಬೌಲ್ ಗಳಲ್ಲಿ 3 ಸಿಕ್ಸ್, 5 ಫೋರ್ ಗಳೊಂದಿಗೆ 53 ರನ್ ಗಳಿಸಿದರು. ಶಿವಂ ದುಬೆ 10 ರನ್ ಗಳಿಸಿ ವಿಫಲರಾದರು. ಪಾಂಡ್ಯ 32 ರನ್ ಗಳಿಸಿದರು. ಜಡೇಜಾ 7, ಅಕ್ಷರ್ ಪಟೇಲ್ 12, ಅರ್ಷದೀಪ್ ಸಿಂಗ್ 2 ರನ್ ಗಳಿಸಿದರು. ಹೀಗಾಗಿ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು.

ಅಫ್ಗನ್ ಪರ ರಶೀದ್ ಖಾನ್ 3, ಫಾರೂಕಿ 3 ವಿಕೆಟ್ ಪಡೆದು ಮಿಂಚಿದರು. ನವೀನ್ ಉಲ್ ಹಕ್ 1 ವಿಕೆಟ್ ಪಡೆದರು. 182 ರನ್ ಗುರಿ ಬೆನ್ನು ಹತ್ತಿದ ರಶೀದ್ ಖಾನ್ ಪಡೆ 134 ರನ್ ಗಳಿಗೆ ಆಲೌಟ್ ಆಯಿತು. ಒಮರಾಝಿ 26, ಜರ್ದನ್ 19, ನೈಬ್ 17 ರನ್ ಗಳಿಸಿದ್ದೆ ಗರಿಷ್ಟ ಸ್ಕೋರ್. ಬೂಮ್ರಾ 4 ಓವರ್ ಗಳಲ್ಲಿ ಕೇವಲ 7 ರನ್ ಕೊಟ್ಟು 3 ವಿಕೆಟ್ ಕಿತ್ತಿದ್ದರು. ಯುವ ಬೌಲರ್ ಅರ್ಷದೀಪ್ ಸಿಂಗ್ ಸಹ 3 ವಿಕೆಟ್ ಪಡೆದು ಮಿಂಚಿದರು. ಕುಲ್ದೀಪ್ ಯಾದವ್ 2, ಅಕ್ಷರ್ ಪಟೇಲ್, ಜಡೇಜಾ ತಲಾ 1 ವಿಕೆಟ್ ಪಡೆದರು. ಸೂರ್ಯಕುಮಾರ್ ಯಾದವ್ ಪ್ಲೇಯರ್ ಆಫ್ ದಿ ಮ್ಯಾಚ್ ಆದರು.




Leave a Reply

Your email address will not be published. Required fields are marked *

error: Content is protected !!