ಮೊಟ್ಟ ಮೊದಲ ಬಾರಿಗೆ ವಿಶ್ವಕಪ್ ಫೈನಲ್ ತಲುಪಿದ ಆಫ್ರಿಕಾ

76

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಐಸಿಸಿ ಟಿ-20 ವಿಶ್ವಕಪ್ ಟೂರ್ನಿ ಕೊನೆಯ ಘಟ್ಟಕ್ಕೆ ಬಂದಿದೆ. ಇಂದು ನಡೆದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಬಲಿಷ್ಠ ಸೌಥ್ ಆಫ್ರಿಕಾ ಪಡೆ ಅಫ್ಗನ್ ತಂಡವನ್ನು ಮಣಿಸುವ ಮೂಲಕ ಫೈನಲ್ ಪ್ರವೇಶಿಸಿದೆ. ಇದರೊಂದಿಗೆ ಹೊಸ ದಾಖಲೆಯನ್ನು ಆಡೆನ್ ಮಾರ್ಕರ್ಮ್ ತಂಡ ಮಾಡಿದೆ. ಇದುವರೆಗೂ ಐಸಿಸಿ ಆಯೋಜಿಸಿರುವ ವಿಶ್ವಕಪ್ ನಲ್ಲಿ ಒಮ್ಮೆಯೂ ಚಾಂಪಿಯನ್ಸ್ ಅಲ್ಲ ಫೈನಲ್ ಗೆ ಬರದೆ ಇದ್ದ ಸೌಥ್ ಆಫ್ರಿಕಾ ತಂಡ ಇದೆ ಮೊದಲ ಬಾರಿಗೆ ಫೈನಲ್ ತಲುಪಿದೆ.

ಟಾಸ್ ಗೆದ್ದ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಅಫ್ಗಾನಿಸ್ತಾನದ ನಾಯಕ ರಶೀದ್ ಖಾನ್ ಪ್ಲಾನ್ ಎಲ್ಲವನ್ನೂ ಆಫ್ರಿಕಾ ಬೌಲರ್ ಗಳು ಉಲ್ಟಾ ಮಾಡಿದರು. 11.5 ಓವರ್ ಗಳಲ್ಲಿ ಕೇವಲ 56 ರನ್ ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಟಿ-20 ವಿಶ್ವಕಪ್ ನಲ್ಲಿ ಅಫ್ಗನ್ ತಂಡ ಸೌಥ್ ಆಫ್ರಿಕಾ ಎದುರು ಅತೀ ಕಡಿಮೆ ರನ್ ಕಲೆ ಹಾಕಿತು.

ಆಫ್ರಿಕಾ ಪರ ಮಾರ್ಕ್ ಜಾನ್ಸನ್ 3 ಓವರ್ 16 ರನ್ 3 ವಿಕೆಟ್, ಟಬರೈಜ್ ಶಮಿಸಿ 1.5 ಓವರ್ 6 ರನ್ 3 ವಿಕೆಟ್ ಪಡೆದು ಮಿಂಚಿದರು. ರಬಡಾ 2, ನೊರ್ಟಜ್ 2 ವಿಕೆಟ್ ಪಡೆದು ಸಾಥ್ ನೀಡಿದರು.

ಈ ಅಲ್ಪ ಸ್ಕೋರ್ ಚೇಸ್ ಮಾಡಿದ ಆಫ್ರಿಕಾ ತಂಡ 8.5 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು 60 ರನ್ ಗಳಿಸಿ ಫೈನಲ್ ಗೆ ಲಗ್ಗೆ ಇಟ್ಟಿತು. ಈ ಮೂಲಕ ಅಫ್ಗನ್ ವಿರುದ್ಧ ಏಕಮೇವಚಕ್ರಾಧಿಪತ್ಯ ಸಾಧಿಸಿತು. ಫಾರೂಕಿ ಬೌಲಿಂಗ್ ನಲ್ಲಿ 5 ರನ್ ಗಳಿಸಿದ್ದ ಡಿ ಕಾಕ್ ವಿಕೆಟ್ ಒಪ್ಪಿಸಿದರು. ಹ್ಯಾಂಡ್ರಿಕ್ಸ್ 29, ನಾಯಕ ಮಾರ್ಕರ್ಮ್ 23 ರನ್ ಗಳಿಸಿ ಗೆಲುವಿನ ದಡ ಸೇರಿಸಿದರು.

ಅಫ್ಗನ್ ತಂಡ ಬಲಿಷ್ಠ ತಂಡಗಳನ್ನು ಹೊರಗೆ ಕಳಿಸಿ ಸೆಮಿ ಫೈನಲ್ ಗೆ ಬಂದು ಹೊಸ ಇತಿಹಾಸ ಬರೆದಿತ್ತು. ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಗೆಲುವು ದಾಖಲಿಸಿದ್ದರೆ ಅಕ್ಷರಶಃ ಅಫ್ಗನ್ ಕ್ರಿಕೆಟ್ ಪ್ರೇಮಿಗಳ ಪಾಲಿಗೆ ಸುವರ್ಣ ಅಕ್ಷರದಿಂದ ಬರೆಯುವ ದಿನವಾಗುತ್ತಿತ್ತು. ಜೊತೆಗೆ ಬಲಿಷ್ಠ ಸೌಥ್ ಆಫ್ರಿಕಾಗೆ ಚೋಕರ್ಸ್ ಹಣೆಪಟ್ಟಿ ಮುಂದುವರೆಯುತ್ತಿತ್ತು. ಯಾಕಂದರೆ ಆಫ್ರಿಕಾ ತಂಡ ಇದುವರೆಗೂ ಏಕದಿನ ಹಾಗೂ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಒಮ್ಮೆಯೂ ಚಾಂಪಿಯನ್ಸ್ ಆಗಿಲ್ಲ. ಸೆಮಿ ಫೈನಲ್ ವರೆಗೂ ಒಂದು ಯಡವುತ್ತಿತ್ತು. ಈ ಬಾರಿ ಅದಾಗದೆ ಫೈನಲ್ ಎಂಟ್ರಿ ಪಡೆದಿದ್ದು ಕಪ್ ಗೆಲ್ಲಲು ಅವರಿಗೆ ಇನ್ನೊಂದು ಅವಕಾಶವಿದೆ.

ಇಂದು ರಾತ್ರಿ ಬಲಿಷ್ಠ ತಂಡಗಳಾದ ಭಾರತ ಹಾಗೂ ಇಂಗ್ಲೆಂಡ್ ನಡುವೆ ಹಣಾಹಣಿ ನಡೆಯಲಿದೆ. ಹಾಲಿ ಚಾಂಪಿಯನ್ಸ್ ಇಂಗ್ಲೆಂಡ್ ತಂಡದ ವಿರುದ್ಧ 2022ರ ಸೋಲಿನ ಸೇಡು ತೀರಿಸಿಕೊಳ್ಳುವ ತವಕದಲ್ಲಿ ರೋಹಿತ್ ಬಳಗ ಸಜ್ಜಾಗಿದೆ. ವಿರಾಟ್ ಕೊಹ್ಲಿ ತಮ್ಮ ಫಾರ್ಮ್ ಗೆ ಬಂದರೆ ರನ್ ಹೊಳೆ ಹರಿಯುವುದು ಪಕ್ಕಾ. ರಾತ್ರಿ 8 ಗಂಟೆಗೆ ನಡೆಯುವ ಪಂದ್ಯ ನೋಡಲು ಇಂಡಿಯನ್ ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!