ಜೂ.24ರಿಂದ ಜು.3ರ ತನಕ ಲೋಕಸಭಾ ಅಧಿವೇಶನ

60

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಲೋಕಸಭಾ ಅಧಿವೇಶನ ಜೂನ್ 24ರಿಂದ ಜುಲೈ 3ರ ತನಕ ನಡೆಯಲಿದೆ ಎಂದು ಸಂಸದ ವ್ಯವಹಾರಗಳ ನೂತನ ಸಚಿವ ಕಿರಣ್ ರಿಜಿಜು ಬುಧವಾರ ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. 18ನೇ ಲೋಕಸಭಾ ಅಧಿವೇಶನ ಜೂನ್ 24ರಿಂದ ಜುಲೈ 3ರ ತನಕ ನಡೆಯಲಿದೆ. ಈ ವೇಳೆ ನೂತನ ಸಂಸದರ ಪ್ರಮಾಣ ವಚನ, ನೂತನ ಸ್ಪೀಕರ್ ಆಯ್ಕೆ ಸಹ ನಡೆಯಲಿದೆ.

ಇನ್ನು ರಾಜ್ಯಸಭೆಯ ಅಧಿವೇಶನ ಜೂನ್ 27ರಿಂದ ಶುರುವಾಗಿ ಜುಲೈ 3ರಂದು ಮುಗಿಯಲಿದೆ ಎಂದು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!