5ನೇ ಹಂತದ ಮತದಾನ, ರಾಷ್ಟ್ರೀಯ ನಾಯಕರು ಹೇಳಿದ್ದೇನು?

91

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಲೋಕಸಭಾ ಚನಾವಣೆಯ 5ನೇ ಹಂತದ ಮತದಾನ ಇಂದು ನಡೆಯುತ್ತಿದೆ. 8 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಸೇರಿ 49 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಈ ಕುರಿತು ರಾಷ್ಟ್ರೀಯ ನಾಯಕರು ಮತದಾರರಿಗೆ ಒಂದಿಷ್ಟು ಸಲಹೆ ನೀಡಿದ್ದಾರೆ.

ಪ್ರಧಾನಿ ಮೋದಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿ, ದಾಖಲೆ ಸಂಖ್ಯೆಯಲ್ಲಿ ಮತದಾನ ಮಾಡಿ. ಅದರಲ್ಲೂ ಮಹಿಳೆಯರು ಹಾಗೂ ಯುವ ಜನತೆ ನಿಮ್ಮ ಹಕ್ಕುಗಳನ್ನು ಚಲಾಯಿಸಿ ಎಂದು ಮನವಿ ಮಾಡುತ್ತೇನೆ ಎಂದಿದ್ದಾರೆ.

ಹಣದುಬ್ಬರ, ನಿರುದ್ಯೋಗ, ಬೆಲೆ ಏರಿಕೆ ವಿರುದ್ಧ ಮತ ಚಲಾಯಿಸಿ. ಪ್ರಜಾಪ್ರಭುತ್ವ ಹಾಗೂ ಸಂವಿಧಾನ ರಕ್ಷಿಸಬೇಕಾದರೆ ಪ್ರತಿಯೊಬ್ಬರು ಪ್ರೀತಿಗಾಗಿ ಮತ ಹಾಕಿ. ದ್ವೇಷಕ್ಕಾಗಿ ಅಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.

ನಿಮ್ಮ ಒಂದು ಮತದಿಂದ ಬಡ ಕುಟುಂಬದ ಹೆಣ್ಮಗಳೊಬ್ಬಳ ಖಾತೆಗೆ 1 ಲಕ್ಷ ರೂಪಾಯಿ ಜಮಾ ಆಗುತ್ತೆ. 30 ಲಕ್ಷ ಯುವಕರಿಗೆ ಉದ್ಯೋಗ ಸಿಗಲಿದೆ. ಎಸ್ಸಿ, ಎಸ್ಟಿ, ಒಬಿಸಿ ಜನರಿಗೆ ಸ್ಥಾನಮಾನ ಸಿಗಲಿದೆ. 25 ಲಕ್ಷದವರೆಗೂ ಉಚಿತ ಚಿಕಿತ್ಸೆ ಸಿಗಲಿದೆ. ಹೀಗಾಗಿ ನಿಮ್ಮ ಒಂದು ಮತ ಹಣದುಬ್ಬರ, ನಿರುದ್ಯೋಗ ಮುಕ್ತಗಳಿಸಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಜಮ್ಮು ಕಾಶ್ಮೀರ್, ಲಡಾಕ್, ಜಾರ್ಖಂಡ್, ಒಡಿಶಾ, ಉತ್ತರ ಪ್ರದೇಶ, ಬಿಹಾರ್, ಪಶ್ಚಿಮ ಬಂಗಾಳ, ಮಹಾರಾಷ್ಟ್ರದಲ್ಲಿ 5ನೇ ಹಂತದ ಮತದಾನ ನಡೆಯುತ್ತಿದೆ.

ರಾಯಬರೇಲಯಿಂದ ರಾಹುಲ್ ಗಾಂಧಿ, ಅಮೇಠಿಯಿಂದ ಸ್ಮೃತಿ ಇರಾನಿ, ಮುಂಬೈ ಉತ್ತರದಿಂದ ಪಿಯೂಷ್ ಗೋಯಲ್, ಲಖನೌದಿಂದ ರಾಜನಾಥ್ ಸಿಂಗ್, ಬಾರಾಮುಲ್ಲಾದಿಂದ ಓಮರ್ ಅಬ್ದುಲ್ ಕಣದಲ್ಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!