ಶ್ರೀ ಶಾಂತಗಂಗಾಧರ ಜಗದ್ಗುರುಗಳ 78ನೇ ಜನ್ಮದಿನ ಆಚರಣೆ

76

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪಟ್ಟಣದಲ್ಲಿರುವ ಗುರುದೇವ ಆಶ್ರಮದ ಶ್ರೀ ಶಾಂತಗಂಗಾಧರ ಜಗದ್ಗುರುಗಳ 78ನೇ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಅಥಣಿಯ ಜುಗುಳದಲ್ಲಿರುವ ಮಲ್ಲಿಕಾರ್ಜುನ ಆಶ್ರಮದಲ್ಲಿ ಶ್ರೀಗಳು ಹುಟ್ಟು ಹಬ್ಬವನ್ನು ಮಠದ ವತಿಯಿಂದ ಹಾಗೂ ಸದ್ಭಕ್ತರು ಕೂಡಿಕೊಂಡು ಜೂನ್ 10, 2024 ಸೋಮವಾರ ಆಚರಿಸಲಾಗುತ್ತಿದೆ.

ಕಳೆದ ಒಂದು ತಿಂಗಳಿಂದ ಮಲ್ಲಿಕಾರ್ಜುನ ಆಶ್ರಮದಲ್ಲಿ ಶಾಂತಗಂಗಾಧರ ಸ್ವಾಮೀಜಿಗಳು ಪ್ರವಚನ ನೀಡಿದ್ದಾರೆ. ಇಂದು ಪ್ರವಚನಕ್ಕೆ ಮಂಗಳ ಹಾಡಲಾಗುತ್ತಿದೆ. ಇದೇ ವೇಳೆ ಶ್ರೀಗಳ 78ನೇ ಹುಟ್ಟು ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಿರುವುದು ಅವರ ಭಕ್ತರಲ್ಲಿ ಖುಷಿ ಮೂಡಿದೆ.

ಸಾಹಿತಿಯಾಗಿಯೂ ಶ್ರೀಗಳ ಸಾಧನೆ:

ಸಿಂದಗಿ ತಾಲೂಕಿನ ಬೂದಿಹಾಳ ಪಿ.ಎಚ್ ಗ್ರಾಮದಲ್ಲಿ ಜೂನ್ 10, 1947ರಲ್ಲಿ ಜನಿಸಿದ ಶ್ರೀಗಳು, ಕಡು ಬಡತನದಲ್ಲಿಯೇ ಬದುಕು ರೂಪಿಸಿಕೊಂಡವರು. ತಳಸಮುದಾಯವಾದ ತಳವಾರ ಜನಾಂಗದ ಸ್ವಾಮೀಜಿಗಳು, ಅಣ್ಣ ಬಸವಣ್ಣನವರ ತತ್ವಗಳ ಅಡಿಯಲ್ಲಿ ತಮ್ಮ ಇಡೀ ಬದುಕನ್ನು ಸವೆಸುತ್ತಿದ್ದಾರೆ. ಇಂತಹ ಶ್ರೀಗಳು ಬರೀ ಪುರಾಣ, ಪ್ರವಚನಕ್ಕೆ ಸೀಮಿತವಾಗದೆ ಲೇಖಕರು ಸಹ ಆಗಿದ್ದಾರೆ.

ಗಂಗಾ ಪುರಾಣ, ಅಂಬಿಗರ ಚೌಡಯ್ಯನ ಸಮ್ರಗ ವಚನಗಳು, ಶ್ರದ್ಧಾನಂದಸ್ವಾಮಿಗಳ ಪುರಾಣ, ಜಾನಪದ ಹಾಸ್ಯ ಕಥೆ, ಅಂಬಿಗರ ಚೌಡಯ್ಯನ ಹಾಡುಗಳು ಸೇರಿದಂತೆ 15ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇತ್ತೀಚೆಗೆ ‘ನಿಜ ಶರಣ ಅಂಬಿಗರ ಚೌಡಯ್ಯ ಗದ್ಯ ಪುರಾಣ’ ಎನ್ನುವ ಬೃಹತ್ ಗ್ರಂಥ ರಚಿಸಿದ್ದಾರೆ.

ಇವರ ಸಾಧನೆಗೆ ಹಲವಾರ ಪುರಸ್ಕಾರಗಳು ಸಂದಿವೆ. ಅಪಾರ ಭಕ್ತ ಬಳಗವನ್ನು ಹೊಂದಿರುವ ಶ್ರೀಗಳು, ಸರ್ವಜನಾಂಗದವರ ಪರವಾಗಿ ಕಾಯಕ ಮಾಡುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!