ಆಸ್ಟ್ರೇಲಿಯಾಗೆ ಸೋಲುಣಿಸಿದ ಅಫ್ಗನ್ ಪಡೆ

77

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಟಿ-20 ವರ್ಲ್ಡ್ ಕಪ್ ನ ಸೂಪರ್ 8 ಪಂದ್ಯಗಳ ಗುಂಪು 1 ತಂಡಗಳಾದ ಆಸ್ಟ್ರೇಲಿಯಾ ಹಾಗೂ ಅಫ್ಗಾನಿಸ್ತಾನ್ ವಿರುದ್ಧ ಭಾನುವಾರ ಮುಂಜಾನೆ ನಡೆದ ಪಂದ್ಯದಲ್ಲಿ ಕಾಂಗೂರು ಪಡೆಯನ್ನು ಅಫ್ಗನ್ ತಂಡ ಸೋಲುಣಿಸಿದೆ. ಇದರೊಂದಿಗೆ ಸೆಮಿ ಫೈನಲ್ ಆಸೆ ಜೀವಂತವಾಗಿರಿಕೊಂಡಿದೆ.

ಟಾಸ್ ಗೆದ್ದ ಆಸೀಸ್ ನಾಯಕ ಮಿಚಲ್ ಮಾರ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ರಶೀದ್ ಖಾನ್ ನಾಯಕತ್ವದ ಅಫ್ಗಾನಿಸ್ತಾನ್ 20 ಓವರ್ ಗಳಲ್ಲಿ 6 ವಿಕೆಟ್ ಗೆ 148 ರನ್ ಗಳಿಸಿತು. ಗುರ್ಬಾಜ್ 60, ಇಬ್ರಾಹಿಂ 51 ರನ್ ಹೊಡೆದು ಮಿಂಚಿದರು. ಆಸೀಸ್ ಪರ ಕಮಿನ್ಸ್ 3, ಜಂಪಾ 2 ವಿಕೆಟ್ ಪಡೆದು ಮಿಂಚಿದರು. ಸ್ಟೋನಿಸ್ 1 ವಿಕೆಟ್ ಪಡೆದರು.

ಈ ಅಲ್ಪ ಗುರಿ ಬೆನ್ನು ಹತ್ತಿದ ಆಸ್ಟ್ರೇಲಿಯಾ ಟೀಂ ನೈಬ್ ಹಾಗೂ ನವೀನ್ ಉಲ್ ಹಕ್ ಬೌಲಿಂಗ್ ದಾಳಿಗೆ 127 ರನ್ ಗಳಿಗೆ 19.2 ಓವರ್ ಗಳಿಗೆ ಆಲೌಟ್ ಆಯಿತು. ಮ್ಯಾಕ್ಸ್ ವೆಲ್ 59 ರನ್ ಬಿಟ್ಟರೆ ಉಳಿದವರು ಹೀಗೆ ಬಂದು ಹಾಗೇ ಹೋದರು. ನೈಬ್ 4, ನವೀನ್ ಉಲ್ ಹಕ್ 3 ವಿಕೆಟ್ ಪಡೆದು ಮಿಂಚಿದರು. ಓರ್ಮಾಜಿ, ನಬಿ, ರಶೀದ್ ಖಾನ್ ತಲಾ 1 ವಿಕೆಟ್ ಪಡೆದರು.




Leave a Reply

Your email address will not be published. Required fields are marked *

error: Content is protected !!