ಭಾರತಕ್ಕೆ ಶರಣಾದ ಬಾಂಗ್ಲಾ

71

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಐಸಿಸಿ ಟಿ-20 ವರ್ಲ್ಡ್ ಕಪ್ ಟೂರ್ನಿಯ ಸೂಪರ್ 8 ಪಂದ್ಯಗಳಲ್ಲಿ ಶನಿವಾರ ಭಾರತ ಹಾಗೂ ಬಾಂಗ್ಲಾ ನಡುವೆ ಕದನ ನಡೆಯಿತು. ಟಾಸ್ ಗೆದ್ದ ಬಾಂಗ್ಲಾ ನಾಯಕ ನಜ್ಮುಲ್ ಸ್ಯಾಂಟೊ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿತು.

ಶರ್ಮಾ 23, ಕೊಹ್ಲಿ 37, ಪಂತ್ 36, ದುಬೆ 34, ಪಾಂಡ್ಯೆ ಅಜೇಯ 50 ಹಾಗೂ ಅಕ್ಷರ್ ಪಟೇಲ್ ಅಜೇಯ 3 ರನ್ ಗಳಿಂದಾಗಿ 5 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿತು. ಬಾಂಗ್ಲಾ ಪರ ತಂಜಿಬ್ ಶಕೀಬ್ ಹಾಗೂ ರಶೀದ್ ಹೊಸೈನ್ ತಲಾ 2 ವಿಕೆಟ್ ಪಡೆದರು. ಶಕೀಬ್ ಹಸನ್ 1 ವಿಕೆಟ್ ಪಡೆದರು.

ಬಿಗ್ ಸ್ಕೋರ್ ಚೇಸ್ ಮಾಡಿದ ಬಾಂಗ್ಲಾ ಪಡೆ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿ 50 ರನ್ ಗಳಿಂದ ಸೋಲೊಪ್ಪಿಕೊಂಡಿತು. ನಾಯಕ ಸ್ಯಾಂಟೊ 40, ತಂಜಿದ್ ಹಸನ್ 29, ರಶೀದ್ ಹಸೈನ್ 24 ರನ್ ರನ್ ಬಿಟ್ಟರೆ ಉಳಿದವರು ಹೆಚ್ಚು ಹೊತ್ತು ನಿಲ್ಲದಂತೆ ಟೀಂ ಇಂಡಿಯಾ ಬೌಲರ್ ಮಾಡಿದರು. ಕುಲ್ದೀಪ್ ಯಾದವ್ 3, ಅರ್ಷದೀಪ್ ಸಿಂಗ್ 2, ಜಸ್ಪ್ರೀತ್ ಬೂಮ್ರಾ 2 ವಿಕೆಟ್ ಪಡೆದು ಮಿಂಚಿದರು. ಪಾಂಡ್ಯ 1 ವಿಕೆಟ್ ಪಡೆದರು. ಅಜೇಯ 50 ರನ್ ಹಾಗೂ 1 ವಿಕೆಟ್ ಪಡೆದ ಟೀಂ ಇಂಡಿಯಾ ಉಪ ನಾಯಕ ಹಾರ್ದಿಕ್ ಪಾಂಡ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಆದರು.

ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಸೆಮಿ ಫೈನಲ್ ಸಮೀಪ ಬಂದಿದೆ. ಇಂದು ನಡೆಯುವ ಆಸ್ಟ್ರೇಲಿಯಾ ಹಾಗೂ ಅಫ್ಘನ್ ಪಂದ್ಯದಲ್ಲಿ ಆಸೀಸ್ ಗೆದ್ದರೆ ಇಂಡಿಯಾ ಸೆಮಿ ಫೈನಲ್ ಫಿಕ್ಸ್ ಆಗಲಿದೆ.




Leave a Reply

Your email address will not be published. Required fields are marked *

error: Content is protected !!