ಕೆರಿಬಿಯನ್ಸ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಆಂಗ್ಲರು

66

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಸೇಂಟ್ ಲೂಸಿಯಾ: ಐಸಿಸಿ ಟಿ-20 ವರ್ಲ್ಡ್ ಕಪ್ ಟೂರ್ನಿಯ ಸೂಪರ್ 8ರ ಪಂದ್ಯದಲ್ಲಿ ವೆಸ್ಟ್ ವಿಂಡೀಸ್ ವಿರುದ್ಧ ಹಾಲಿ ಚಾಂಪಿಯನ್ಸ್ ಇಂಗ್ಲೆಂಡ್ ಗೆಲುವು ಸಾಧಿಸಿದೆ. ಕೆರಿಬಿಯನ್ಸ್ ನೀಡಿದ್ದ 181 ರನ್ ಗಳ ಗುರಿಯನ್ನು 17.3 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ತಲುಪಿದೆ. ಇದರೊಂದಿಗೆ ವೆಸ್ಟ್ ವಿಂಡೀಸ್ ಸತತ 8 ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದೆ.

ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜಾಸ್ ಬಟ್ಲರ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ವಿಂಡೀಸ್ ಪರ ಬಾರ್ಡನ್ ಕಿಂಗ್ 23, ಜಾನ್ಸನ್ ಜಾರ್ಲಿಸ್ 38, ಪೂರಾನ್ 36, ನಾಯಕ ಪೊಯಲ್ 36 ರನ್ ಗಳಿಸಿ ಔಟ್ ಆದರು. ಅಂತಿಮವಾಗಿ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿತು.

ಈ ಸ್ಕೋರ್ ಬೆನ್ನಹತ್ತಿದ ಇಂಗ್ಲೆಂಡ್ ತಂಡ ಸಾಲ್ಟ್ ಅಜೇಯ 87, ಜಾನಿ ಬ್ರಿಸ್ಟೊ ಅಜೇಯ 48 ರನ್ ಗಳಿಂದಾಗಿ 2 ವಿಕೆಟ್ ನಷ್ಟಕ್ಕೆ 17.3 ಓವರ್ ಗಳಲ್ಲಿ ಗೆಲುವಿನ ಗೆರೆ ದಾಟಿತು. ಪಿಲಿಪ್ ಸಾಲ್ಟ್ ಮ್ಯಾನ್ ಆಫ್ ದಿ ಪ್ಲೇಯರ್ ಪಡೆದರು.




Leave a Reply

Your email address will not be published. Required fields are marked *

error: Content is protected !!