ಮೋದಿ ನಾಯಕ ಎಂದು ಇಂದು ಆಯ್ಕೆ ಮಾಡಲಿರುವ ಸಂಸದರು

83

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಜೂನ್ 4ರಂದು ಫಲಿತಾಂಶ ಬಂದ ಬಳಿಕ ಬಿಜೆಪಿಯಲ್ಲಿ ಸಾಕಷ್ಟು ಟೆನ್ಷನ್ ಸೃಷ್ಟಿಯಾಗಿದೆ. ಈ ಬಾರಿ 400 ಅಂದವರು 300ರ ಗಡಿ ಅಲ್ಲ ಸ್ಪಷ್ಟ ಬಹುಮತ ಸಹ ಬರಲಿಲ್ಲ. ಹೀಗಾಗಿ ಇತರೆ ಪಕ್ಷಗಳ ಸಹಕಾರದೊಂದಿಗೆ ಸರ್ಕಾರ ರಚನೆ ಮಾಡುವ ಸ್ಥಿತಿ ಬಂದಿದೆ.

ಕಳೆದ ಎರಡು ದಿನಗಳಿಂದ ಸಭೆಯ ಮೇಲೆ ಸಭೆ ಮಾಡುತ್ತಾ ಸರ್ಕಾರ ರಚನೆಯ ಕಸರತ್ತು ನಡೆಸಿದೆ. ಇಂದು ಬಿಜೆಪಿ ಹಾಗೂ ಎನ್ ಡಿಎ ಸಂಸದರ ಕೂಡಿಕೊಂಡು ತಮ್ಮ ನಾಯಕ ಮೋದಿ ಎಂದು ಆಯ್ಕೆ ಮಾಡಲಿದ್ದಾರೆ. ನಂತರ ರಾಷ್ಟ್ರಪತಿ ಎದುರು ಹೋಗಿ ಸರ್ಕಾರ ರಚನೆಗೆ ಅವಕಾಶ ಕೋರಲಿದ್ದಾರೆ.

ನರೇಂದ್ರ ಮೋದಿ 3ನೇ ಬಾರಿಗೆ ಪ್ರಧಾನಿಯಾಗುವುದು ಬಹುತೇಕ ಖಚಿತ. ಭಾನುವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. 543 ಸದಸ್ಯ ಬಲದ ಸಂಸತ್ತಿನಲ್ಲಿ ಬಿಜೆಪಿ 240 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್ 99 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಎನ್ ಡಿಎ ಸೇರಿದರೆ 293 ಆಗುತ್ತೆ. ಇಂಡಿಯಾ ಸೇರಿದರೆ 234 ಇದೆ. ಬಹುಮತಕ್ಕೆ 272 ಸ್ಥಾನಗಳು ಬೇಕು. ಇದನ್ನು ಪಡೆಯುವಲ್ಲಿ ಬಿಜೆಪಿ, ಕಾಂಗ್ರೆಸ್ ವಿಫಲವಾದ ಪರಿಣಾಮ ಮಿತ್ರ ಪಕ್ಷಗಳೊಂದಿಗೆ ಸೇರಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ.


TAG


Leave a Reply

Your email address will not be published. Required fields are marked *

error: Content is protected !!