ಮನೆ ಮೇಲೆ ಗೋಡೆ ಕುಸಿದು ಬಿದ್ದು ನಾಲ್ವರು ದುರ್ಮರಣ

63

ಪ್ರಜಾಸ್ತ್ರ ಸುದ್ದಿ

ಉಳ್ಳಾಲ: ಮನೆಯೊಂದರ ಮೇಲೆ ಪಕ್ಕದ ಮನೆಯ ಗೋಡೆ ಕುಸಿದು ಬಿದ್ದ ಪರಿಣಾಮ ನಾಲ್ವರು ಮೃತಪಟ್ಟ ಘಟನೆ ದಕ್ಷಿಣ ಜಿಲ್ಲೆ ಉಳ್ಳಾಲ ತಾಲೂಕಿನ ಮುನ್ನೂರು ಗ್ರಾಮದ ಕುತ್ತಾರು ಮದನಿ ನಗರದಲ್ಲಿ ಬುಧವಾರ ಮುಂಜಾನೆ ನಡೆದಿದೆ.

ಯಾಸಿರ್(45), ಪತ್ನಿ ಮರಿಯಮ್ಮ(40), ಮಕ್ಕಳಾದ ರಿಫಾನ(17) ಹಾಗೂ ರಿಯಾನ(11) ಮೃತ ದುರ್ದೈವಿಗಳು. ಬಕ್ರೀದ್ ಹಬ್ಬಕ್ಕೆ ಗಂಡನ ಮನೆಯಿಂದ ಬಂದಿದ್ದ ಹಿರಿಯ ಮಗಳು ರಶೀನಾ ಮಂಗಳವಾರವಷ್ಟೇ ವಾಪಸ್ ಆಗಿದ್ದಳು.

ಅಬೂಬಕ್ಕರ್ ಎಂಬುವರಿಗೆ ಸೇರಿದ ಕಟ್ಟಡದ ಆವರಣದ ಗೋಡೆ ಯಾಸಿರ್ ಮನೆಯ ಮೇಲೆ ಬಿದ್ದು ಈ ದುರಂತ ನಡೆದಿದೆ. ಮೂವರ ಮೃತದೇಹಗಳನ್ನು ಸ್ಥಳೀಯರು ಹೊರ ತೆಗೆದಿದ್ದರು. ಅಗ್ನಿಶಾಮಕ ಸಿಬ್ಬಂದಿ, ತುರ್ತು ಸೇವಾದಳ ಕೂಡಿಕೊಂಡು ಎರಡ್ಮೂರು ಗಂಟೆಗಳ ಕಾರ್ಯಾಚರಣೆ ನಡೆಸಿ ಅವಶೇಷಗಳಡಿ ಸಿಲುಕಿದ್ದ ಬಾಲಕಿಯ ಮೃತದೇಹ ಹೊರ ತೆಗೆದಿದ್ದಾರೆ.

ಮಂಗಳೂರಿನ ಬಂದರಿನಲ್ಲಿ ಮಡ್ಡಿ ಆಯಿಲ್ ಕೆಲಸ ಮಾಡುತ್ತಿದ್ದ ಯಾಸಿರ್ 6 ವರ್ಷಗಳ ಹಿಂದೆ ಮನೆ ಖರೀದಿಸಿದ್ದರು. ಇಲ್ಲಿ ಇರದೆ ಭೋಗಕ್ಕೆ ಬಿಟ್ಟಿದ್ದರು. ಆದರೆ 6 ತಿಂಗಳ ಹಿಂದೆಯಷ್ಟೇ ತಮ್ಮ ಮನೆಗೆ ಬಂದು ವಾಸವಾಗಿದ್ದರು. ಈಗ ನೋಡಿದರೆ ಈ ದುರಂತ ನಡೆದಿದೆ.




Leave a Reply

Your email address will not be published. Required fields are marked *

error: Content is protected !!