ಪ್ರಜಾಸ್ತ್ರ ಸುದ್ದಿ
ಬಳ್ಳಾರಿ(Ballari): ಗುರುವಾರ ರಾತ್ರಿ ಕೇವಲ ಒಂದು ಬ್ಯಾನರ್ ವಿಚಾರಣವಾಗಿ ನಡೆದ ಎರಡು ಗುಂಪುಗಳ ನಡುವಿನ ಘರ್ಷಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಗುಂಡೇಟಿಗೆ ಬಲಿಯಾಗಿದ್ದಾನೆ. ಅಧಿಕಾರ ವಹಿಸಿಕೊಂಡ ಮರುದಿನವೇ ಎಸ್ಪಿ ಅಮಾನತು ಆಗಿದ್ದಾರೆ. ಇಷ್ಟೆಲ್ಲ ಘಟನೆಗಳಿಗೆ ಕಾರಣವಾದ ಘರ್ಷಣೆ ಜನರ ಶಾಂತಿ ಕೆಡಿಸಿದೆ.
ಈ ಬಗ್ಗೆ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ನಗರ ಶಾಸಕ ನಾರಾ ಭರತ್ ರೆಡ್ಡಿ, ನನ್ನಿಂದ ಸಾರ್ವಜನಿಕರ ಶಾಂತಿಗೆ ಭಂಗವಾಗಿದ್ದರೆ, ಜನರಿಗೆ ತೊಂದರೆಯಾಗಿದ್ದರೆ ಶಾಸಕನಾಗಿ ನಾನು ಕ್ಷಮೆ ಕೇಳಿತ್ತೇನೆ. ಇದು ಆಕಸ್ಮಿಕ ಘಟನೆಯಾಗಿದೆ. ತನಿಖೆ ಬಳಿ ಸತ್ಯ ಹೊರ ಬರಲಿದೆ ಎಂದರು. ಇಂದು ನಡೆಯಬೇಕಿದ್ದ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮ ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಮುಖ್ಯಮಂತ್ರಿಗಳ ಸೂಚನೆಯಂತೆ ನಾನು ಬಳ್ಳಾರಿಗೆ ಬಂದಿದ್ದೇನೆ. ಸಿಎಂ, ಡಿಸಿಎಂ ನಿರ್ದೇಶನಂತೆ ಕಾರ್ಯಕ್ರಮ ಮುಂದೂದಲಾಗಿದೆ ಎಂದು ಶಾಸಕ ನಾಗೇಂದ್ರ ಈ ವೇಳೆ ಹೇಳಿದರು.




