Ad imageAd image

ಸಿಂದಗಿ: ಲಾಠಿ ಚಾರ್ಜ್ ಖಂಡಿಸಿ ಪಂಚಮಸಾಲಿ ಸಮಾಜದಿಂದ ಪ್ರತಿಭಟನೆ

Nagesh Talawar
ಸಿಂದಗಿ: ಲಾಠಿ ಚಾರ್ಜ್ ಖಂಡಿಸಿ ಪಂಚಮಸಾಲಿ ಸಮಾಜದಿಂದ ಪ್ರತಿಭಟನೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): 2ಎ ಮೀಸಲಾತಿ ವಿಚಾರವಾಗಿ ಬೆಳಗಾವಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದ ಪಂಚಮಸಾಲಿ ಸಮಾಜದವರ ಮೇಲೆ ಲಾಠಿ ಚಾರ್ಜ್ ಮಾಡಿರುವುದನ್ನು ಖಂಡಿಸಿ  ಪಟ್ಟಣದ ಬಸವೇಶ್ವರ ವೃತ್ತದಲ್ಲಿ ತಾಲೂಕು ಪಂಚಮಸಾಲಿ ಸಮಾಜದ ವತಿಯಿಂದ ಭಾನುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಡಾ.ಚನ್ನವೀರ(ಮುತ್ತು) ಮನಗೂಳಿ, ಪಕ್ಷ ಅಥವಾ ಸರ್ಕಾರ ಯಾವುದೇ ಇರಲಿ ಸಮಾಜದ ಪ್ರಶ್ನೆ ಬಂದಾಗ ನಾವು ಯಾವಾಗಲೂ ಸಮಾಜದ ಪರ ಹಾಗೂ ಸಮಾಜವನ್ನು ಮುನ್ನೆಡೆಸುತ್ತಿರುವ ಪಂಚಮಸಾಲಿ ಪೀಠದ ಜಗದ್ಗುರು ಜಯಬಸವ ಮೃತ್ಯುಂಜಯ ಸ್ವಾಮೀಜಿಯವರ ಬೆನ್ನೆಲುಬಾಗಿ ನಿಲ್ಲುತ್ತೇವೆ ಎಂದು ಹೇಳಿದರು.

ಡಿಸೆಂಬರ್ 18ರಂದು ಪೂಜ್ಯರು ಬೆಳಗಾವಿಯಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಸಿಂದಗಿ ತಾಲೂಕಿನಿಂದ ಪಾಲ್ಗೊಳ್ಳುವ ಅಪಾರ ಜನರಿಗೆ ವಾಹನ ವ್ಯವಸ್ಥೆ ಕಲ್ಪಿಸಲಾಗಿದ್ದು, ಪ್ರತಿಭಟನೆಯಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಕರೆ ನೀಡಿದರು. ಸಮಾಜದ ತಾಲೂಕಾಧ್ಯಕ್ಷ ಎಂ.ಎಂ.ಹಂಗರಗಿ, ಅಶೋಕ ಅಲ್ಲಾಪೂರ ಹಾಗೂ ಶಿವಾರಾಜ ಪೋಲಿಸಪಾಟೀಲ ಮಾತನಾಡಿ, 2ಎ ಮೀಸಲಾತಿಗಾಗಿ ಬೆಳಗಾವಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರ ಮೇಲೆ ಅಧಿಕಾರಿಗಳನ್ನು ಬಿಟ್ಟು ಲಾಠಿ ಚಾರ್ಜ್ ಮಾಡಿಸಿ ನೂರಾರು ಜನರಿಗೆ ತೀವ್ರಗಾಯ ಹಾಗೂ ಹಲವಾರು ಜನರು ಆಸ್ಪತ್ರೆಯಲ್ಲಿ ದಾಖಲಾಗುವಂತೆ ಮಾಡಿದ ಲಿಂಗಾಯತ ವಿರೋಧಿ ಸಿದ್ದರಾಮಯ್ಯನವರ ನಡೆ ಅಸಂವಿಧಾನಿಕ ಎಂದು ಹೇಳಿದರು.

ವಕೀಲರ ಸಂಘದ ಮಾಜಿ ಅಧ್ಯಕ್ಷ ದಾನಪ್ಪಗೌಡ ಚನಗೊಂಡ ಮಾತನಾಡಿ, ತಮ್ಮ ಸ್ವ ಸ್ವಾರ್ಥಕ್ಕೊಸ್ಕರ ಮುಖ್ಯಮಂತ್ರಿಯ ಚೇಲಾನಂತೆ ವರ್ತಿಸುತ್ತಿರುವ ವಿಜಯಾನಂದ ಕಾಶಪ್ಪನವರ ಆಧುನಿಕ ಕೊಂಡಿ ಮಂಚಣ್ಣ ಎಂದು ನಿಂದಿಸಿದ ಅವರು, ಯಾರೇ ಆಗಲಿ ಸಮಾಜವನ್ನು ದಿಕ್ಕು ತಪ್ಪಿಸುವ ಕಾರ್ಯ ಮಾಡಿದರೆ ಖಂಡಿತ ಸಹಿಸುವುದಿಲ್ಲ. ಸಿದ್ದರಾಮಯ್ಯನವರು ವಿರೋಧ ಪಕ್ಷದಲ್ಲಿದ್ದಾಗ ಪಂಚಮಸಾಲಿಗಳಿಗೆ 2ಎ ಮೀಸಲಾತಿ ಸಂವಿಧಾನಿಕ ಹಕ್ಕು. ಅದು ಪಂಚಮಸಾಲಿಗಳಿಗೆ ದೊರೆಯಬೇಕು ಎಂದು ಹೇಳಿದರು. ಇಂದು ಅದೇ ಮಾತನ್ನು ತಿರುಚಿ ಮಾತನಾಡುತ್ತಿರವುದು ಅವರ ಅಜ್ಞಾನವನ್ನು ಎತ್ತಿ ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಆರ್.ಡಿ.ದೇಸಾಯಿ, ಆನಂದ ಶಾಬಾದಿ, ಚಂದ್ರಶೇಖರ ನಾಗರಬೆಟ್ಟಿ, ಮಲ್ಲನಗೌಡ ಪಾಟೀಲ ಇಬ್ರಾಹಿಂಪೂರ, ಶಿವಾನಂದ ಬಡಾನೂರ, ಮಲ್ಲಿಕಾರ್ಜುನ ಅಲ್ಲಾಪೂರ, ಚಂದ್ರಗೌಡ ಪಾಟೀಲ, ಬಸವರಾಜ ಐರೋಡಗಿ, ಗೊಲ್ಲಾಳಪ್ಪಗೌಡ ಪಾಟೀಲ ಗೋಲಗೇರಿ, ಸಂಗನಗೌಡ ಪಾಟೀಲ ಯಂಕಂಚಿ, ಶ್ರೀಶೈಲ ಚೆಳ್ಳಗಿ, ಗಂಗಾಧರ ಕಡಗಂಚಿ, ಬಸವರಾಜ ಕಡಕಂಚಿ, ಈರಣ್ಣ ಕಲಬುರ್ಗಿ, ರಾಮು ಯಳಮೇಲಿ, ರಾಜು ಮುಜಗೊಂಡ, ಕಲ್ಯಾಣಿ ಬಿರಾದಾರ, ಪ್ರಕಾಶ ಪಾಟೀಲ ಶಿವಪೂರ, ರಮೇಶ ಬಿರಾದಾರ, ಮಲ್ಲು ಬಿರಾದಾರ ನಾವದಗಿ, ಪಂಡಿತ ಯಂಪುರೆ, ಹರ್ಷವರ್ಧನ ಪೂಜಾರಿ, ಕಾಂತೂ ಯಳಮೇಲಿ ಸೇರಿದಂತೆ ಅನೇಕ ಸಮಾಜದ ಮುಖಂಡರಿದ್ದರು.

WhatsApp Group Join Now
Telegram Group Join Now
Share This Article