Ad imageAd image

ಗಾಜಾದಲ್ಲಿ 1 ಪ್ಯಾಕ್ ಪಾರ್ಲೆ-ಜಿ ಬಿಸ್ಕತ್ 2 ಸಾವಿರ ರೂಪಾಯಿಗೆ ಅಧಿಕ

Nagesh Talawar
ಗಾಜಾದಲ್ಲಿ 1 ಪ್ಯಾಕ್ ಪಾರ್ಲೆ-ಜಿ ಬಿಸ್ಕತ್ 2 ಸಾವಿರ ರೂಪಾಯಿಗೆ ಅಧಿಕ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಗಾಜಾ(Gaza): ಭಾರತದಲ್ಲಿ ಒಂದು ಪಾರ್ಲೆ-ಜಿ ಬಿಸ್ಕತ್ ಬೆಲೆ ಐದು ರೂಪಾಯಿ ಇದೆ. ಆದರೆ, ಸಂಘರ್ಷ ಪೀಡಿತ ಗಾಜಾದಲ್ಲಿ ಬರೋಬ್ಬರಿ 24 ಯುರೊಗೆ ಮಾರಾಟವಾಗುತ್ತಿದೆ. ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ 2,342 ರೂಪಾಯಿ. ತೀವ್ರ ಆಹಾರ ಕೊರತೆ ಎದುರಿಸುತ್ತಿರುವ ಗಾಜಾದಲ್ಲಿನ ಪರಿಸ್ಥಿತಿ ಎಷ್ಟೊಂದು ಘೋರವಾಗಿದೆ ಅನ್ನೋದಕ್ಕೆ ಇದು ಸಾಕ್ಷಿಯಾಗಿದೆ. ಈ ಬಗ್ಗೆ ಟ್ರಿಬ್ಯೂನ್ ವೆಬ್ ಸೈಟ್ ವರದಿ ಮಾಡಿದೆ.

ಕಳೆದ ಜೂನ್ 1ರಿಂದ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಮೊಹಮ್ಮದ್ ಜವಾದ್ ಅನ್ನೋ ವ್ಯಕ್ತಿ ತನ್ನ ಮಗಳಿಗೆ ಪಾರ್ಲೆ-ಜಿ ಬಿಸ್ಕತ್ ಕೊಡಿಸಿರುವ ಕುರಿತು ಮಾಡಿದ ವಿಡಿಯೋ ಅದು. 1.5 ಯುರೋ ಇದ್ದ ಬಿಸ್ಕೆತ್ ಬೆಲೆ 24 ಯುರೊಗೆ ಏರಿಕೆಯಾಗಿದೆ. ಮಗಳ ಬೇಡಿಕೆ ಈಡೇರಿಸದೆ ಇರಲು ಆಗಲಿಲ್ಲ ಎಂದಿದ್ದಾರೆ. ಅಲ್ಲದೆ ವಿದೇಶಿ ನೆರವು ಗಾಜಾ ಜರಿಗೆ ಪ್ರಾಮಾಣಿಕವಾಗಿ ತಲುಪುತ್ತಿಲ್ಲವೆಂದು ಹೇಳಿದ್ದಾರೆ.

ಬಿಸ್ಕತ್ ಪ್ಯಾಕ್ ಹೊತ್ತು ಹೊರಟಿದ್ದ ಟ್ರಕ್ ಅನ್ನು ಹಮಾಸ್ ದವರು ವಶಕ್ಕೆ ಪಡೆದು ಕಾಳಸಂತೆಯಲ್ಲಿ 2,500 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರಂತೆ. ಪ್ಯಾಲೆಸ್ಟೀನ್ ಜನರಿಗೆ ನೆರವಿನ ರೂಪದಲ್ಲಿ ಹೋದ ಬಿಸ್ಕತ್ ಅವರಿಗೆ ಸರಿಯಾಗಿ ಸಿಗುತ್ತಿಲ್ಲವಂತೆ.

WhatsApp Group Join Now
Telegram Group Join Now
Share This Article