ಪ್ರಜಾಸ್ತ್ರ ಸುದ್ದಿ
ಹಾವೇರಿ(Haveir): ಬುಧವಾರವಷ್ಟೇ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ(By Election) ಮತದಾನ ನಡೆದಿದೆ. ಇದೀಗ ಎಲ್ಲರ ಚಿತ್ತ ಇರುವುದು ನವೆಂಬರ್ 23ರ ಫಲಿತಾಂಶದತ್ತ ಇದೆ. ಇದರ ನಡುವೆ ಇದೀಗ ಜಿಲ್ಲೆಯ ಯತ್ನಳಿ ಹತ್ತಿರದ ಕಾಲುವೆಯಲ್ಲಿ 10 ಬ್ಯಾಲೆಟ್(Ballot Box) ಬಾಕ್ಸ್ ಗಳು ಪತ್ತೆಯಾಗಿವೆ. ಶಿಗ್ಗಾವಿ ವಿಧಾನಸಭಾ ಕ್ಷೇತ್ರಕ್ಕೆ ಬುಧವಾರ ಮತದಾನ ನಡೆದಿದೆ. ಇದರಿಂದಾಗಿ ಜನರಲ್ಲಿ ಸಾಕಷ್ಟು ಅನುಮಾನ ಮೂಡಿದೆ.
ಗುರುವಾರ ಮುಂಜಾನೆ ಬ್ಯಾಲೆಟ್ ಬಾಕ್ಸ್ ಗಳು ಗ್ರಾಮಸ್ಥರ ಕಣ್ಣಿಗೆ ಬಿದ್ದಿವೆ. ಈ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರಂತೆ. ಈ ಕುರಿತು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಮಾತನಾಡಿದ್ದು, ಬ್ಯಾಲೆಟ್ ಬಾಕ್ಸ್ ಗಳು ಪತ್ತೆಯಾದ ಬಗ್ಗೆ ಮಾಹಿತಿ ಪಡೆದುಕೊಳ್ಳಲು ತಹಶೀಲ್ದಾರ್ ಗೆ ತಿಳಿಸಲಾಗಿದೆ ಎಂದಿದ್ದಾರೆ. ಕೆಲ ಮಾಹಿತಿ ಪ್ರಕಾರ ಈ ಬಾಕ್ಸ್ ಗಳು ಹಳೆಯದಾಗಿವೆ. ಶಿಗ್ಗಾವಿ(Shiggavi) ಉಪ ಚನಾವಣೆಗೆ ಸಂಬಂಧಿಸಿದ್ದಲ್ಲ ಎನ್ನಲಾಗುತ್ತಿದೆ. ಅಧಿಕಾರಿಗಳ ತನಿಖೆಯಿಂದ ತಿಳಿದು ಬರಬೇಕಿದೆ.