ಪ್ರಜಾಸ್ತ್ರ ಸುದ್ದಿ
ಟೆಹರಾನ್: ಅಮೆರಿಕ ಹಾಗೂ ಇರಾನ್ ನಡುವಿನ ಯುದ್ಧಕ್ಕೆ ಎರಡು ವಾರಗಳ ವಿರಾಮ ನೀಡಲಾಗಿದೆ. ಕದನ ವಿರಾಮಕ್ಕೆ ಒಪ್ಪಿಕೊಂಡಿರುವ ಇರಾನ್, 10 ಪ್ರಮುಖ ಬೇಡಿಕೆಗಳನ್ನು ಇಟ್ಟಿದೆ. ಇದು ಯುದ್ಧದ ಅಂತ್ಯವಲ್ಲ ಎಂದು ಸಹ ಇರಾನ್ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಹೇಳಿದ್ದಾರೆ.
ಸರ್ಕಾರಿ ಒಡೆತನದ ಐಆರ್ ಐಬಿ ಈ ಬಗ್ಗೆ ಪ್ರಕಟಿಸಿದ್ದು, ಇದು ಯುದ್ಧದ ಅಂತ್ಯವಲ್ಲ. ಎಲ್ಲ ಮಿಲಟಿರಿ ಶಾಖೆಗಳು ಸರ್ವೋಚ್ಚ ನಾಯಕರ ಆದೇಶವನ್ನು ಪಾಲಿಸಬೇಕು. ತಮ್ಮ ದಾಳಿಯನ್ನು ನಿಲ್ಲಿಸಬೇಕು ಎಂದು ಸೂಚಿಸಲಾಗಿದೆ. ಶತ್ರು ದೇಶಗಳ ವರ್ತನೆ ಮೇಲೆ ನಮ್ಮ ನಿರ್ಧಾರ ನಿಂತಿದೆ ಎಂದಿದೆ.
ಕಳೆದ 39 ದಿನಗಳ ಯುದ್ಧದಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಪಾರ ಪ್ರಮಾಣದ ಆಸ್ತಿ ಪಾಸ್ತಿಗಳನ್ನು ಕಳೆದುಕೊಂಡಿದ್ದಾರೆ. ಅಮೆರಿಕ ಹಾಗೂ ಇರಾನ್ ನಡುವಿನ ಪ್ರಸ್ತಾವನೆ ಮೂಲಕ ಇದೀಗ ಎರಡು ವಾರಗಳ ಕದನ ವಿರಾಮ ನೀಡಲಾಗಿದೆ. ಏಪ್ರಿಲ್ 10ರಂದು ಇಸ್ಲಾಮಾಬಾದ್ ನಲ್ಲಿ ಮಾತುಕತೆ ನಡೆಯಲಿದೆಯಂತೆ. 15 ಅಂಶಗಳ ಪ್ರಸ್ತಾವನೆಯನ್ನು ಅಮೆರಿಕ ಕಳಿಸಿದ್ದು, ಇದರಲ್ಲಿ 10 ಅಂಶಗಳನ್ನು ಇರಾನ್ ಸ್ವೀಕರಿಸಿದೆ.
ಇರಾನ್ ಮತ್ತು ಅದರ ಮೌಲಸೌಕರ್ಯಗಳ ಮೇಲೆ ದಾಳಿ ನಿಲ್ಲಿಸಬೇಕು. ಹೊರ್ಮುಜ್ ಜಲಸಂಧಿ ಇರಾನ್ ಸೇನೆಯ ನಿರ್ವಹಣೆಯಲ್ಲೆ ನಡೆಯುತ್ತದೆ. ಒಪ್ಪಿಕೊಂಡ ಪ್ರೋಟೊಕಾಲ್ ಪಾಲಿಸಬೇಕು. ಪರಮಾಣು ಎನ್ ರಿಚ್ ಮೆಂಟ್ ಒಪ್ಪಿ ಮುಂದುವರೆಯಬೇಕು. ಇರಾನ್ ಮತ್ತು ಇರಾನ್ ವಿದೇಶಿ ಸ್ವತ್ತುಗಳ ಮೇಲಿನ ಪ್ರಾಥಮಿಕ, ದ್ವಿತೀಯ ನಿರ್ಬಂಧಗಳನ್ನು ಕೈಬಿಡಬೇಕು. ಇರಾನ್ ಗೆ ಆಗಿರುವ ಸಂಪೂರ್ಣ ಹಾನಿಯನ್ನು ಪಾವತಿಸಬೇಕು. ಲೆಬನಾನ್ ಸೇರಿ ಎಲ್ಲ ಕಡೆ ಯುದ್ಧ ನಿಲ್ಲಬೇಕು. ಐಎಇಎ ಆಡಳಿತ ಮಂಡಳಿ ಎಲ್ಲ ನಿರ್ಣಯಗಳು ಮುಕ್ತಾಯ, ವಿಶ್ವ ಸಂಸ್ಥೆಯ ಎಲ್ಲ ನಿರ್ಣಯಗಳನ್ನು ರದ್ದು ಮಾಡಬೇಕು. ಹೀಗೆ 10 ಷರತ್ತುಗಳನ್ನು ಇರಾನ್ ಹಾಕಿದೆ.




