Ad imageAd image

ಆನ್ಲೈನ್ ಕೆಲಸದ ವಂಚನೆ, 10 ಜನರ ಬಂಧನ

ಆನ್ಲೈನ್ ಜಾಬ್ ಮೂಲಕ ಹಲವಾರು ಜನರಿಗೆ ಮೋಸ ಮಾಡಿದ 10 ಜನರ ತಂಡವನ್ನು ಪೊಲೀಸರು ಬಂಧಿಸಿದ್ದಾರೆ.

Nagesh Talawar
ಆನ್ಲೈನ್ ಕೆಲಸದ ವಂಚನೆ, 10 ಜನರ ಬಂಧನ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಆನ್ಲೈನ್ ಜಾಬ್(Online Job) ಮೂಲಕ ಹಲವಾರು ಜನರಿಗೆ ಮೋಸ ಮಾಡಿದ 10 ಜನರ ತಂಡವನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಉತ್ತರ ವಿಭಾಗದ ಸಿಇಎನ್ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಅವರಿಂದ 72 ಮೊಬೈಲ್(Mobile) ಗಳು, 182 ಡೆಬಿಟ್(Debit Card) ಕಾರ್ಡ್ ಗಳು, 133 ಸಿಮ್(SIM Card) ಕಾರ್ಡ್ ಗಳು, 127 ಬ್ಯಾಂಕ್ ಪಾಸ್ ಬುಕ್, 2 ಲ್ಯಾಪ್ ಟಾಪ್, 1.74 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಇವರೆಲ್ಲರೂ ಬೆಂಗಳೂರು ಮೂಲದವರೆ ಆಗಿದ್ದಾರೆ.

ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಹಲವು ವಿಚಾರಗಳು ಬೆಳಕಿಗೆ ಬಂದಿವೆ. ಇವರ ವಿರುದ್ಧ 21 ರಾಜ್ಯಗಳಲ್ಲಿ 122 ಎನ್ ಸಿಆರ್ ಪಿ(NCRP) ಪ್ರಕರಣಗಳು ದಾಖಲಾಗಿವೆ. ಸುಮಾರು 6 ಕೋಟಿ ರೂಪಾಯಿ ವಂಚನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ವಾಟ್ಸಪ್(WhatsApp) ಮೂಲಕ ಮೆಸೇಜ್ ಕಳಿಸಿ ಆನ್ಲೈನ್ ಜಾಬ್ ಆಸೆ ತೋರಿಸುತ್ತಿದ್ದರು. ಐಷಾರಾಮಿ ಹೋಟೆಲ್(Hotel) ಗಳ ಬಗ್ಗೆ ರಿವ್ಯೂವ್ ನೀಡಬೇಕು ಎನ್ನುತ್ತಿದ್ದರು. ರಿವ್ಯೂವ್ ರಿಪೋರ್ಟ್ ಜೊತೆಗೆ 150, 200 ರೂಪಾಯಿ ಹಾಕಬೇಕು. ನಂತರ ಅವರಿಗೆ 400 ರೂಪಾಯಿಯಿಂದ 500 ರೂಪಾಯಿ ಹಾಕುವ ಮೂಲಕ ನಂಬಿಕೆ ಗಳಿಸಿ ಆನಂತರ ವಂಚನೆ ಮಾಡುತ್ತಿದ್ದರು.

WhatsApp Group Join Now
Telegram Group Join Now
Share This Article