Ad imageAd image

ಟ್ರ್ಯಾಕ್ಟರ್ ಗೆ ಟ್ರಕ್ ಡಿಕ್ಕಿ, 10 ಜನರ ಸಾವು

ಟ್ರಕ್ ವೊಂದು ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದ ಪರಿಣಾಮ 10 ಜನರು ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ನಡೆದಿದೆ.

Nagesh Talawar
ಟ್ರ್ಯಾಕ್ಟರ್ ಗೆ ಟ್ರಕ್ ಡಿಕ್ಕಿ, 10 ಜನರ ಸಾವು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಮಿರ್ಜಾಪುರ್(Mirzapur): ಟ್ರಕ್ ವೊಂದು ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದ ಪರಿಣಾಮ 10 ಜನರು ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ನಡೆದಿದೆ. ಮಧ್ಯರಾತ್ರಿ ಸುಮಾರು 1ಗಂಟೆಯ ವೇಳೆಗೆ ಕಚವನ್ ಹಾಗೂ ಮಿರ್ಜಾಮುರದ್ ನಡುವಿನ ಜಿ.ಟಿ ರಸ್ತೆಯಲ್ಲಿ ಅಪಘಾತ(Accident) ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಟ್ಟಡ ನಿರ್ಮಾಣಕ್ಕಾಗಿ ಟ್ರ್ಯಾಕ್ಟರ್ ನಲ್ಲಿ ಕುಳಿತು 13 ಕಾರ್ಮಿಕರು ಭದೋಹಿ ಜಿಲ್ಲೆಯ ಕಡೆಗೆ ಹೊರಟಿದ್ದರು. ಈ ವೇಳೆ ಟ್ರಕ್(Tractor and Truck) ವೊಂದು ಹಿಂದಿನಿಂದ ಟ್ರಾಲಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ನಡೆದಿದೆ. ಈ ವಿಚಾರ ತಿಳಿದು ಪೊಲೀಸರು ರಾತ್ರಿಯೇ ಸ್ಥಳಕ್ಕೆ ಆಗಮಿಸಿದ್ದಾರೆ. ಗಾಯಗೊಂಡ ಮೂವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ.

WhatsApp Group Join Now
Telegram Group Join Now
Share This Article