ಪ್ರಜಾಸ್ತ್ರ ಸುದ್ದಿ
ಕಾಸರಗೋಡು(Kasaragod): ಕೇರಳದ ಕಾಸರಗೋಡು ಜಿಲ್ಲೆಯ ಪೆರಿಯ ಹತ್ತಿರ 2019 ಫೆಬ್ರವರಿ 17ರಂದು ಇಬ್ಬರು ಕಾಂಗ್ರೆಸ್ ನ ಯುವ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಸಿಪಿಐ(ಎಂ)ನ ಮಾಜಿ ಶಾಸಕ ಕೆ.ವಿ ಕುಂಇರಾಮನ್ ಸೇರಿ 10 ಮಂದಿಗೆ ಜೀವಾವಧಿ ಶಿಕ್ಷೆಯನ್ನು(Life Imprisonment) ಕೊಚ್ಚಿಯಲ್ಲಿನ ಸಿಬಿಐ(CBI) ವಿಶೇಷ ನ್ಯಾಯಾಲಯ ಆದೇಶಿಸಿದೆ.
ಕಾನ್ಹಂಗಾಡ್ ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ.ಮಣಿಕಂಠನ್, ಸಿಪಿಐ(ಎಂ)(CPIM) ಸ್ಥಳೀಯ ಸಮಿತಿ ಸದಸ್ಯ ಎ.ಪೀತಾಂಬರನ್, ಕಾರ್ಯದರ್ಶಿ ರಾಘವನ್ ಮೆಲುತೋಳಿ ಸೇರಿ 10 ಜನರು ಅಪರಾಧಿಗಳೆಂದು ಸಾಬೀತಾಗಿದೆ. ಇವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಲಾಗಿದೆ. ಕೃಪೇಶ್(19) ಹಾಗೂ ಶರತ್ ಲಾಲ್ ಪಿ.ಕೆ(24) ಕೊಲೆಯಾದ ಇಬ್ಬರು ಕಾಂಗ್ರೆಸ್(Congress) ಯುವ ಕಾರ್ಯಕರ್ತರು. ಎರಡು ಪಕ್ಷಗಳ ನಡುವಿನ ರಾಜಕೀಯ ದಾಳಿ, ಪ್ರತಿದಾಳಿಯಲ್ಲಿ ಹತ್ಯೆ ಮಾಡಲಾಗಿತ್ತು.