ಪ್ರಜಾಸ್ತ್ರ ಸುದ್ದಿ
ಹಾವೇರಿ(Haveri): ಬುಧವಾರ ಮುಂಜಾನೆ ತರಕಾರಿ ಲಾರಿಯೊಂದು ಪಲ್ಟಿಯಾಗಿ ಬರೋಬ್ಬರಿ 10 ಜನರ ಸಾವಿಗೆ ಕಾರಣವಾದ ಘಟನೆ ಕಾರವಾರ ಜಿಲ್ಲೆಯ ಯಲ್ಲಾಪುರ ಹತ್ತಿರ ನಡೆದಿದೆ. 19 ಮಂದಿ ಗಾಯಗೊಂಡಿದ್ದಾರೆ. 12 ಜನರನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರ ಘೋಷಿಸಿರುವ 3 ಲಕ್ಷ ರೂಪಾಯಿ ಪರಿಹಾರದ ಆದೇಶ ಪ್ರತಿ ನೀಡಿದರು. ಹಾವೇರಿ ಜಿಲ್ಲೆ ಶಿಗ್ಗಾವಿ ಶಾಸಕ ಯಾಸೀರ್ ಅಹ್ಮದ್ ಪಠಾಣ್ ಅವರು ಯಲ್ಲಾಪುರ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ ಸಾಂತ್ವಾನ ಹೇಳಿದ್ದಾರೆ. ಅವರು ಅಲ್ಲಿಯೇ ಉಳಿದುಕೊಂಡು ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದಾರೆ.
ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ, ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್, ಶಿಗ್ಗಾವಿ ಶಾಸಕ ಯಾಸೀರ್ ಅಹ್ಮದ್ ಪಠಾಣ್ ಅವರು ಸಂತ್ರಸ್ತರ ಕಟುಂಬಸ್ಥರಿಗೆ ಪರಿಹಾರದ ಆದೇಶದ ಪ್ರತಿ ಹಸ್ತಾಂತರಿಸಿದರು. ಇನ್ನು ಹಾವೇರಿ ಜಿಲ್ಲೆಯ ಹೆಚ್ಚುವರಿ ಎಸ್ಪಿ ಲಕ್ಷ್ಮಣ ಶಿರಕೋಳ ಮೃತಪಟ್ಟವರ ಕುಟುಂಬಗಳಿಗೆ ತೆರಳಿ ಸಾಂತ್ವಾನ ಹೇಳಿದ್ದಾರೆ.