Ad imageAd image

ರಾಜ್ಯ ಸರ್ಕಾರದಿಂದ ವಾಯನಾಡು ಸಂತ್ರಸ್ತರಿಗೆ 100 ಮನೆ: ಸಿಎಂ ಸಿದ್ದರಾಮಯ್ಯ

ಕೇರಳದ ವಾಯನಾಡಿನಲ್ಲಿ ಜುಲೈ 30ರಂದು ಭೀಕರ ಭೂಕುಸಿತದಿಂದಾಗಿ(Landslide) ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ನೂರಾರು ಜನರು ನಾಪತ್ತೆಯಾಗಿದ್ದಾರೆ.

Nagesh Talawar
ರಾಜ್ಯ ಸರ್ಕಾರದಿಂದ ವಾಯನಾಡು ಸಂತ್ರಸ್ತರಿಗೆ 100 ಮನೆ: ಸಿಎಂ ಸಿದ್ದರಾಮಯ್ಯ
WhatsApp Group Join Now
Telegram Group Join Now

ಪ್ರಜಾಸ್ತ್ರ ಸದ್ದಿ

ಬೆಂಗಳೂರು(Bengaloru): ಕೇರಳದ ವಾಯನಾಡಿನಲ್ಲಿ(Wayanada) ಜುಲೈ 30ರಂದು ಭೀಕರ ಭೂಕುಸಿತದಿಂದಾಗಿ(Landslide) ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ನೂರಾರು ಜನರು ನಾಪತ್ತೆಯಾಗಿದ್ದಾರೆ. ಸಾವಿರಾರು ಜನರ ಬದುಕು ಬೀದಿಗೆ ಬಿದ್ದಿದೆ. ಹೀಗಾಗಿ ದೇಶದ ವಿವಿಧ ರಾಜ್ಯಗಳಿಂದ ನೆರವಿನ ಕೈ ಚಾಚಲಾಗ್ತಿದೆ. ಇದೇ ರೀತಿ ಕರ್ನಾಟಕದಿಂದಲೂ(Karnataka) ಕೇರಳಕ್ಕೆ ಸಹಾಯ ಮಾಡಲಾಗುತ್ತಿದೆ. ಇನ್ನು ರಾಜ್ಯ ಸರ್ಕಾರದಿಂದ 100 ಮನೆಗಳನ್ನು ನಿರ್ಮಿಸಿ ಕೊಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಿಎಂ, ಭೂಕುಸಿತದಿಂದ ಸೂರು(Home) ಕಳೆದುಕೊಂಡ 100 ಕುಟುಂಬಗಳಿಗೆ ನಮ್ಮ ಸರ್ಕಾರ ಮನವೀಯ ನೆಲೆಯಲ್ಲಿ ಮತ್ತೆ ಮನೆ ನಿರ್ಮಿಸಿ ಕೊಡಲಿದೆ ಎಂಬ ಭರವಸೆಯನ್ನು ಕೇರಳ ಮುಖ್ಯಮಂತ್ರಿ ಪಿಣಿರಾಯ ವಿಜಯನ್ ಅವರಿಗೆ ನೀಡಿದ್ದೇನೆ. ಸಂಕಷ್ಟದ ಕಾಲದಲ್ಲಿ ಜೊತೆ ನಿಂತು ಭರವಸೆಯನ್ನು ಮರಳಿ ಕಟ್ಟೋಣ ಎಂದು ಹೇಳಿದ್ದಾರೆ.

WhatsApp Group Join Now
Telegram Group Join Now
Share This Article