Ad imageAd image

10, 12ನೇ ತರಗತಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ

ಎಸ್ಎಸ್ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಸೋಮವಾರ ಕರ್ನಾಟಕ ಶಾಲಾ ಪರೀಕ್ಷೆ ಮತ್ತು

Nagesh Talawar
10, 12ನೇ ತರಗತಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಎಸ್ಎಸ್ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಸೋಮವಾರ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ಬಿಡುಗಡೆ ಮಾಡಿದೆಮಾರ್ಚ್ 1ರಿಂದ 19ರ ತನಕ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿವೆ. . ಎಸ್ಎಸ್ಎಲ್ ಸಿ ಪರೀಕ್ಷೆ ಮಾರ್ಚ್ 20ರಂದು ಏಪ್ರಿಲ್ 2ರ ತನಕ ನಡೆಯಲಿವೆ.

ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ: ಮಾರ್ಚ್ 1ರಂದು ಕನ್ನಡ, ಅರೆಬಿಕ್, ಮಾರ್ಚ್ 3-ಗಣಿತ, ಶಿಕ್ಷಣ ಶಾಸ್ತ್ರ, ತರ್ಕಶಾಸ್ತ್ರ, ವ್ಯವಹಾರ ಅಧ್ಯನ ನಡೆಯಲಿವೆ. ಮಾರ್ಚ್ 4-ತಮಿಳು, ತೆಲುಗು, ಮಲಯಾಳ, ಮರಾಠಿ, ಉರ್ದು, ಸಂಸ್ಕೃತ, ಫ್ರಂಚ್ ಪರೀಕ್ಷೆಗಳು ನಡೆಯಲಿವೆ. ಮಾರ್ಚ್ 5- ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಮಾರ್ಚ್ 7-ಇತಿಹಾಸ, ಭೌತಶಾಸ್ತ್ರ, ಮಾರ್ಚ್ 8-ಹಿಂದಿ, ಮಾರ್ಚ್ 10- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಗೃಹವಿಜ್ಞಾನ, ಭೂಗರ್ಭಶಾಸ್ತ್ರ, ಮಾರ್ಚ್ 12- ರಸಾಯನಶಾಸ್ತ್ರ, ಮನಃಶಾಸ್ತ್ರ, ಮೂಲ ಗಣಿತ, ಮಾರ್ಚ್ 13-ಅರ್ಥಶಾಸ್ತ್ರ, ಮಾರ್ಚ್ 15-ಇಂಗ್ಲಿಷ್, ಮಾರ್ಚ್ 17-ಭೂಗೋಳಶಾಸ್ತ್ರ, ಜೀವಶಾಸ್ತ್ರ, ಮಾರ್ಚ್ 18-ಸಮಾಜಶಾಸ್ತ್ರ, ಗಣಕ ವಿಜ್ಞಾನ, ವಿದ್ಯನ್ಮಾನಶಾಸ್ತ್ರ, ಮಾರ್ಚ್ 19-ಮಾಹಿತಿ ತಂತ್ರಜ್ಞಾನ, ಹಿಂದೂಸ್ಥಾನಿ ಸಂಗೀತ, ಆಟೋಮೊಬೈಲ್, ಬ್ಯೂಟಿ ಅಂಡ್ ವೆಲ್ ನೆಸ್, ಹೆಲ್ತ್ ಕೇರ್, ರಿಟೇಲ್ ಪರೀಕ್ಷೆಗಳು ನಡೆಯಲಿವೆ.

ಎಸ್ಎಸ್ಎಲ್ ಸಿ ಪರೀಕ್ಷೆ ವೇಳಾಪಟ್ಟಿ: ಮಾರ್ಚ್ 20- ಪ್ರಥಮ ಭಾಷೆ ಕನ್ನಡ, ತೆಲುಗು, ಹಿಂದಿ, ತಮಿಳು, ಮರಾಠಿ, ಉರ್ದು, ಇಂಗ್ಲಿಷ್,(ಎನ್ ಸಿಇಆರ್ ಟಿ), ಸಂಸ್ಕೃತ, ಮಾರ್ಚ್ 22-ಸಮಾಜ ವಿಜ್ಞಾನ, ಮಾರ್ಚ್ 24-ದ್ವಿತೀಯ ಭಾಷೆ ಇಂಗ್ಲಿಷ್, ಕನ್ನಡ, ಮಾರ್ಚ್ 27-ಗಣಿತ, ಮಾರ್ಚ್ 29-ತೃತೀಯ ಭಾಷೆ ಹಿಂದಿ, ಕನ್ನಡ, ಪರ್ಷಿಯನ್, ಇಂಗ್ಲಿಷ್, ತುಳು, ಉರ್ದು, ಅರೇಬಿಕ್, ಕೊಂಕಣಿ, ಸಂಸ್ಕೃತ, ಎನ್ಎಸ್ಕ್ಯೂಎಫ್ ಹಾಗೂ ಏಪ್ರಿಲ್ 2 ವಿಜ್ಞಾನ ಪರೀಕ್ಷೆ ನಡೆಯಲಿದೆ.

WhatsApp Group Join Now
Telegram Group Join Now
Share This Article