ಪ್ರಜಾಸ್ತ್ರ ಸುದ್ದಿ
ಕೊಪ್ಪಳ(Koppala): ತಾಯಿ ನಿಧನದ ನಡುವೆಯೂ ಶುಕ್ರವಾರ 10ನೇ ತರಗತಿ ವಿದ್ಯಾರ್ಥಿ ಪರೀಕ್ಷೆ ಬರೆದಿದ್ದಾನೆ. ಗಂಗಾವತಿ ತಾಲೂಕಿನ ಕೆಸರಹಟ್ಟಿ ಗ್ರಾಮದ ಅಡಿವೆಯ್ಯಸ್ವಾಮಿ ಹಿರೇಮಠ ಅನ್ನೋ ವಿದ್ಯಾರ್ಥಿಯ ತಾಯಿ ಇಂದು ಮುಂಜಾನೆ ಮೃತಪಟ್ಟಿದ್ದಾರೆ. ಇದರ ದುಃಖದ ನಡುವೆಯೂ ವಿದ್ಯಾರ್ಥಿ ಪರೀಕ್ಷೆ ಬರೆದಿದ್ದಾನೆ. ಗ್ರಾಮದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದಾನೆ.
ವಿದ್ಯಾರ್ಥಿಯ ತಾಯಿ ವಿಜಯಲಕ್ಷ್ಮಿ ಸಿದ್ದಯ್ಯಸ್ವಾಮಿ ಅವರು ಸ್ನಾನದ ಕೋಣೆಯಲ್ಲಿ ಜಾರಿ ಬಿದ್ದು ತಲೆಗೆ ಗಾಯಮಾಡಿಕೊಂಡಿದ್ದರು. ರಕ್ತಹೆಪ್ಪುಗಟ್ಟಿ ಶುಕ್ರವಾರ ಮುಂಜಾನೆ ನಿಧನರಾಗಿದ್ದಾರೆ. ಈ ನೋವಿನಲ್ಲಿದ್ದ ವಿದ್ಯಾರ್ಥಿಗೆ ಕುಟುಂಬಸ್ಥರು, ಶಿಕ್ಷಕರು ಮನವೊಲಿಸಿ ಪರೀಕ್ಷೆ ಬರೆಯುವಂತೆ ಮಾಡಿದ್ದಾರೆ. ನಂತರ ಅಂತಿಮ ವಿಧಿಯಲ್ಲಿ ತೊಡಗಿಸಿಕೊಂಡಿದ್ದಾನೆ.