ಪ್ರಜಾಸ್ತ್ರ ಸುದ್ದಿ
ಕೊಡಗು(Kodagu): 14 ದಿನದ ಬಾಣಂತಿ ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕೊಟ್ಟೋಳಿಯಲ್ಲಿ ನಡೆದಿದೆ. ಕಾವೇರಮ್ಮ(24) ಆತ್ಮಹತ್ಯೆ ಮಾಡಿಕೊಂಡ ಯುವತಿಯಾಗಿದ್ದಾಳೆ. ಎಂ.ಎಂ ದಿನೇಶ್ ಎಂಬುವರಿಗೆ 4 ವರ್ಷಗಳ ಹಿಂದೆ ಮದುವೆಯಾಗಿದೆ. ಸ್ನಾನಗೃಹದಲ್ಲಿ ಸೀರೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸಾವಿಗೆ ಸರಿಯಾದ ಕಾರಣ ತಿಳಿದು ಬಂದಿಲ್ಲ. ಹೀಗಾಗಿ ಹಲವು ಅನುಮಾನುಗಳನ್ನು ಮೂಡಿಸಿದೆ. ಮೃತ ಯುವತಿಯ ಸಹೋದರ ತಿಮ್ಮಯ್ಯ ವಿರಾಜಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ಕಾವೇರಮ್ಮ ಪತಿ ದಿನೇಶ್ ಮನೆ ಹತ್ತಿರದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿರುವಾಗ ಮಗು(Child) ಅಳುವ ಶಬ್ಧ ಕೇಳಿಸಿದೆ. ಸುಮಾರು ಹೊತ್ತಾದರೂ ಮಗು ಅಳುವುದು ನಿಲ್ಲಿಸಿಲ್ಲ. ಹೀಗಾಗಿ ಪತಿ ಮನೆಗೆ ಬಂದು ನೋಡಿದಾಗ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಹೇಳಲಾಗುತ್ತಿದೆ. ವಿರಾಜಪೇಟೆ ತಾಲೂಕಿನ ಕರಡ ಗ್ರಾಮದ ದಿವಂಗತ ಕಟ್ಟಿ ಬಿದ್ದಪ್ಪ ಹಾಗೂ ಶೀಲಾ ದಂಪತಿಯ ಮಗಳಾದ ಕಾವೇರಮ್ಮ ಹಾಗೂ ಎಂ.ಎಂ ದಿನೇಶ್ ಮದುವೆ ನಾಲ್ಕು ವರ್ಷಗಳ ಹಿಂದೆ ನಡೆದಿದೆ. ಈಗ ತಾಯಿ ಸಾವಿನಿಂದ ಹಸಿಗೂಸು ಅನಾಥವಾಗಿದೆ. ಕುಟುಂಬದಲ್ಲಿ ದುಃಖ ಮಡುಗಟ್ಟಿದೆ.