ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಎಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ ಜೋರಾಗಿದೆ. ಹೀಗಾಗಿ ಪಟಾಕಿ ಸದ್ದು ಬಲು ಜೋರಾಗಿಯೇ ಮಾಡಿವೆ. ಇದರ ಜೊತೆಗೆ ಪಟಾಕಿಯಿಂದ 14 ಜನರು ಗಾಯಗೊಂಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಇದರಲ್ಲಿ ಐವರು ಮಕ್ಕಳು ಸೇರಿದ್ದಾರೆ.
ನಾರಾಯಣ ನೇತ್ರಾಲಯದಲ್ಲಿ 3 ಪ್ರಕರಣ, ಮಿಂಟೋ ಆಸ್ಪತ್ರೆಯಲ್ಲಿ 2 ಪ್ರಕರಣ ದಾಖಲಾಗಿದ್ದು, ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದರ ಜೊತೆಗೆ ನಗರದ ವಿವಿಧ ಆಸ್ಪತ್ರೆಗಳಲ್ಲಿ ಸುಟ್ಟ ಗಾಯಗಳಿಂದ ಬಳಲುತ್ತಿರುವವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯೊಂದರಲ್ಲಿ ಪಟಾಕಿ ಹಚ್ಚಿದಾಗ ಕಿಡಿಗಳು ಸಿಡಿದಿ 3 ವರ್ಷದ ಪುಟ್ಟ ಬಾಲಕನ ಕಣ್ಣಿಗೆ ಗಾಯವಾಗಿದೆ. 12 ವರ್ಷದ ಬಾಲಕಿಯ ಕಣ್ಣಿನ ಕಾರ್ನಿಯ ಭಾಗಕ್ಕೆ ಸಣ್ಣಪ್ರಮಾಣದಲ್ಲಿ ಹಾನಿಯಾಗಿದೆ.