ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರ ಹಿಡಿಯಲು ಆಡಳಿತರೂಢ ಆಪ್ ಪಕ್ಷ ಭರ್ಜರಿ ಸಿದ್ಧತೆ ನಡೆಸಿದೆ. ಈಗಾಗ್ಲೇ ನಿರುದ್ಯೋಗಿ ಮಹಿಳೆಯರಿಗೆ ಗೌರವ ಧನ, ಹಿರಿಯ ನಾಯಕರಿಗೆ ಉಚಿತ ಆರೋಗ್ಯ ಯೋಜನೆಯನ್ನು ಘೋಷಿಸಿದೆ. ಇದೀಗ ಹಿಂದೂ, ಸಿಖ್ ಪುರೋಹಿತರಿಗೆ ಮಾಸಿಕ 18 ಸಾವಿರ ರೂಪಾಯಿ ನೀಡುವ ಪೂಜಾರಿ ಗ್ರಂಥಿ ಸಮ್ಮಾನ್ ಯೋಜನೆಯನ್ನು ಘೋಷಿಸಿದೆ.
ಮಾಜಿ ಮುಖ್ಯಮಂತ್ರಿ, ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಈ ಯೋಜನೆ ಘೋಷಿಸಿದ್ದಾರೆ. ಮಂಗಳವಾರದಿಂದ ನೋಂದಣಿ ಕೆಲಸ ನಡೆಯಲಿದೆ. ಆಪ್ ಸರ್ಕಾರ ಅಧಿಕಾರಕ್ಕೆ ಬಂದರೆ ಇವರಿಗೆಲ್ಲ ಮಾಸಿಕ 18 ಸಾವಿರ ರೂಪಾಯಿ ನೀಡಲಾಗುವುದು ಎಂದಿದ್ದಾರೆ. ಈ ಮೂಲಕ ದೇವಾಲಯ, ಗುರುಧ್ವಾರಗಳ ಪುರೋಹಿತರನ್ನು ಸೆಳೆಯುವುದರ ಜೊತೆಗೆ ಬಿಜೆಪಿ ಧಾರ್ಮಿಕ ರಾಜಕೀಯಕ್ಕೆ ಶಾಕ್ ನೀಡಿದೆ.