ಪ್ರಜಾಸ್ತ್ರ ಸುದ್ದಿ
ಕೊಲ್ಕತ್ತಾ(Kolkata): ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ(Rape and Murder) ಹಾಗೂ ಕೊಲೆ ಪ್ರಕರಣ ಸಂಬಂಧ ಪಶ್ಚಿಮ ಬಂಗಾಳದಲ್ಲಿ ಹೋರಾಟ ತೀವ್ರಗೊಂಡಿದೆ. ಅದು ಹಿಂಸಾರೂಪ ಪಡೆದುಕೊಂಡಿದ್ದು ಆರ್.ಜೆ ಕರ್ ಆಸ್ಪತ್ರೆಯ ಮೇಲೆ ದಾಳಿ ಮಾಡಿ, ಅಲ್ಲಿನ ವಸ್ತುಗಳನ್ನು ಹಾಳು ಮಾಡಲಾಗಿದೆ. ಈ ಘಟನೆ ಸಂಬಂಧ ಪೊಲೀಸರು ಇದೀಗ 19 ಜನರನ್ನು ಬಂಧಿಸಿದ್ದಾರೆ.
ಈ ಬಗ್ಗೆ ಶುಕ್ರವಾರ ಪೊಲೀಸರು ಮಾಹಿತಿ ನೀಡಿದ್ದಾರೆ. ಬಂಧತರನ್ನು ಆಗಸ್ಟ್ 22ರ ತನಕ ನ್ಯಾಯಾಂಗ(judicial custody) ಬಂಧನಕ್ಕೆ ನೀಡಲಾಗಿದೆ. ಬುಧವಾರ ತಡರಾತ್ರಿ ಆಸ್ಪತ್ರೆಗೆ ನುಗ್ಗಿ ಅಲ್ಲಿನ ವಸ್ತುಗಳನ್ನು (damaged)ಧ್ವಜಗೊಳಿಸಲಾಗಿದೆ. ಈ ವೇಳೆ ಹಲವರು ಗಾಯಗೊಂಡಿದ್ದಾರೆ. ಇಂದು ಸಹ ಪ್ರತಿಭಟನೆ ಮುಂದುವರೆದಿದೆ.