ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಬಿಬಿಎಂಪಿ ಗುತ್ತಿಗೆದಾರ(contractor) ಚಲುವರಾಜ ಎಂಬುವರಿಗೆ 30 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟು ಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪದ ಮೇಲೆ ಬಿಜೆಪಿ ಶಾಸಕ ಮುನಿರತ್ನ(munirathna)ಸೇರಿ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ವೈಯ್ಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಚಲುವರಾಜ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಲಾಗಿದೆ. ಇದರಲ್ಲಿ ಶಾಸಕರ ಆಪ್ತ ವಸಂತಕುಮಾರ್, ಸರ್ಕಾರಿ ಅಧಿಕಾರಿ ವಿಜಯಕುಮಾರ್, ಕಾರ್ಯದರ್ಶಿ ಅಭಿಷೇಕ್ ಎಂಬುವರ ಹೆಸರುಗಳಿವೆ.
ಇನ್ನು ವೇಲುನಾಯಕ್ ಎಂಬುವರು ಜಾತಿ ನಿಂದನೆಯ ದೂರು ದಾಖಲಿಸಿದ್ದು, ಇದರ ಆಧಾರದ ಮೇಲೆ ಶಾಸಕ ಮುನಿರತ್ನ ವಿರುದ್ಧ 2ನೇ ಎಫ್ಐಆರ್ ದಾಖಲಾಗಿದೆ. ಗುತ್ತಿಗೆದಾರ ಚಲುವರಾಜಗೆ ಅಶ್ಲೀಲವಾಗಿ ಬೈದಿರುವ, ದಲಿತ ಸಮುದಾಯದ ವ್ಯಕ್ತಿಯೊಬ್ಬರಿಗೆ ಜಾತಿ ನಿಂದನೆ, ಗುತ್ತಿಗೆದಾರನ ಹೆಂಡ್ತಿಯ ಬಗ್ಗೆಯೂ ಕೀಳಾಗಿ ಮಾತನಾಡಿದ್ದು, ಅವರ ವಿರುದ್ಧ ಗೃಹ ಸಚಿವರು ಕ್ರಮ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್ ಮಾಜಿ ಸಂಸದ ಡಿ.ಕೆ ಸುರೇಶ್(DK Suresh) ಆಗ್ರಹಿಸಿದ್ದಾರೆ.
80ರ ದಶಕದ ಬಳಿಕ ದಲಿತ ಸಮುದಾಯದ ಮೇಲೆ ಯಾರೂ ಇಂಥ ಪದ ಬಳಕೆ ಮಾಡಿಲ್ಲ. ಇಂಥ ಪದ ಬಳಕೆ ಮಾಡುವುದು ಎಷ್ಟು ಸರಿ? ಒಕ್ಕಲಿಗ ಹೆಣ್ಮಕ್ಕಳನ್ನು ಮಂಚಕ್ಕೆ ಕರೆಯುವುದು ಎಷ್ಟು? ಈ ಬಗ್ಗೆ ಬಿಜೆಪಿಯ ಒಕ್ಕಲಿಗ ನಾಯಕರು ಉತ್ತರಿಸಬೇಕು. ಒಕ್ಕಲಿಗ ಕೇಂದ್ರ ಸಚಿವರು ನಡ್ಡಾಗೆ, ಮೋದಿಗೆ ವರದಿ ಕೊಡಬೇಕು. ಆರ್.ಅಶೋಕ್ ಈ ಬಗ್ಗೆ ಹೇಳಬೇಕು ಎಂದು ಡಿ.ಕೆ ಸುರೇಶ್ ಆಗ್ರಹಿಸಿದ್ದಾರೆ.