Ad imageAd image

ಖಾತಾ ಮ್ಯೂಟೇಶನ್ ಗೆ 2 ಲಕ್ಷ ಲಂಚ: ಲೋಕಾ ಬಲೆಗೆ ಮುಖ್ಯಾಧಿಕಾರಿ

Nagesh Talawar
ಖಾತಾ ಮ್ಯೂಟೇಶನ್ ಗೆ 2 ಲಕ್ಷ ಲಂಚ: ಲೋಕಾ ಬಲೆಗೆ ಮುಖ್ಯಾಧಿಕಾರಿ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ರಾಯಚೂರು(Raichoru): ಹೊಸ ಲೇಔಟ್ ನ 34 ನಿವೇಶನಗಳ ಖಾತೆ ಮ್ಯೂಟೇಶನ್ ಮಾಡಿಕೊಡಲು 2 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟು, 1 ಲಕ್ಷ ರೂಪಾಯಿ ಮುಂಗಡ ಪಡೆಯುತ್ತಿದ್ದ ವೇಳೆ ಮುಖ್ಯಾಧಿಕಾರಿ ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದಿದ್ದಾರೆ. ಸಿರವಾರ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಸುರೇಶ್ ಶೆಟ್ಟಿ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ.

ರಾಘುರಾಮ ರೆಡ್ಡಿ ಎಂಬುವರಿಗೆ ಖಾತಾ ಮ್ಯೂಟೇಶನ್ ಮಾಡಿಕೊಡಲು 2 ಲಕ್ಷ ರೂಪಾಯಿ ಲಂಚ ಕೇಳಿದ್ದಾರೆ. ಈ ಬಗ್ಗೆ ಲೋಕಾಯುಕ್ತರಿಗೆ ಇವರು ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಹಣದ ಸಮೇತ ಕಾರಿನಲ್ಲಿ ಪರಾರಿಯಾಗಿದ್ದಾರೆ.

ಸಿರವಾರದಿಂದ ಕವಿತಾಳ ಕಡೆಗೆ ಹೋದ ಮುಖ್ಯಾಧಿಕಾರಿ ಸ್ನೇಹಿತನ ಮನೆಯಲ್ಲಿ ಅಡಗಿ ಕುಳಿತ್ತಿದ್ದ. ಮೊಬೈಲ್ ಲೋಕೇಶನ್ ಆಧಾರದ ಮೇಲೆ ಟ್ರೇಸ್ ಮಾಡಿ ಸುರೇಶನನ್ನು ಪತ್ತೆ ಹಚ್ಚಿದ್ದಾರೆ. ಇದೀಗ ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.

WhatsApp Group Join Now
Telegram Group Join Now
Share This Article