ಪ್ರಜಾಸ್ತ್ರ ಸುದ್ದಿ
ಜೈಸಲ್ಮೇರ್(Jaisalmer): ಖಾಸಗಿ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡು 20 ಜನರು ಸಜೀವದಹನ ಆಗಿರುವ ಭೀಕರ ಘಟನೆ ರಾಜಸ್ಥಾನದ ಜೈಸಲ್ಮೇರ್-ಜೋಧಪರ್ ಹೆದ್ದಾರಿಯಲ್ಲಿ ನಡೆದಿದೆ. ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡ ಬಳಿಕ ಚಾಲಕ ಬಸ್ಸನ್ನು ರಸ್ತೆಬದಿಗೆ ನಿಲ್ಲಿಸಿದ್ದಾರೆ. ಅಷ್ಟರಲ್ಲೇ ಬೆಂಕಿ ವ್ಯಾಪಕವಾಗಿ ಆವರಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
57 ಪ್ರಯಾಣಿಕರನ್ನು ಜೈಸಲ್ಮೇರ್ ದಿಂದ ಕರೆದುಕೊಂಡು ಹೊರಟಿದ್ದ ಬಸ್ ನಲ್ಲಿ ಇಂತಹದೊಂದು ದುರಂತ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜಸ್ಥಾನ್ ಮುಖ್ಯಮಂತ್ರಿ ಲಾಲ್ ಶರ್ಮಾ ರಾತ್ರಿ ಸ್ಥಳಕ್ಕೆ ಭೇಟಿ ನೀಡಿದರು. ಕೆಲವರು ಶೇಕಡ 70ರಷ್ಟು ಗಾಯಗೊಂಡಿದ್ದು ಜವಾಹರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತಪಟ್ಟವರಲ್ಲಿ ಇಬ್ಬರು ಮಕ್ಕಳು, ನಾಲ್ವರು ಮಹಿಳೆಯರಿದ್ದಾರೆ.