Ad imageAd image

ಸ್ವಾಮಿ ವಿವೇಕಾನಂದ ಜಯಂತಿ: ಗ್ರಂಥಾಲಯಕ್ಕೆ 200 ಪುಸ್ತಕ, ಟೆಜರಿ ಕೊಡುಗೆ

Nagesh Talawar
ಸ್ವಾಮಿ ವಿವೇಕಾನಂದ ಜಯಂತಿ: ಗ್ರಂಥಾಲಯಕ್ಕೆ 200 ಪುಸ್ತಕ, ಟೆಜರಿ ಕೊಡುಗೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಆಲಮೇಲ(Alalmela): ತಾಲೂಕಿನ ಕಡಣಿ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಯುವ ಬ್ರಿಗೇಡ್ ವತಿಯಿಂದ ಅರಿವೆ ಗುರು ಅನ್ನೋ ಶೀರ್ಷಿಕೆಯಡಿಯಲ್ಲಿ, 200 ಪುಸ್ತಕ ಹಾಗೂ ಟೆಜರಿಯನ್ನು ಗ್ರಂಥಾಲಯಕ್ಕೆ ಕೊಡುಗೆ ನೀಡಲಾಯಿತು. ಗ್ರಾಮದ ಪರಮಾನಂದ ಭೊಗಲಿಂಗೇಶ್ವರ ಶಿಕ್ಷಣ ಸಂಸ್ಥೆಗೆ ಗ್ರಂಥಾಲಯಕ್ಕೆ ಪುಸ್ತಕ ಹಾಗೂ ಟೆಜರಿಯನ್ನು ಕೊಡುವುದರ ಮೂಲಕ ಶೈಕ್ಷಣಿಕವಾಗಿ ಮಕ್ಕಳ ಬೆಳವಣಿಗೆಗೆ ಪ್ರಯತ್ನಮಾಡುತ್ತಿದೆ ಎಂದು ಯುವ ಬ್ರಿಗೇಡ್ ಕುರಿತಂತೆ ಪ್ರಸ್ತಾವಿಕವಾಗಿ ವಿಭಾಗ ಸಹ ಸಂಚಾಲಕರು ಶಿವಮೂರ್ತಿ ಕಾಟಕರ ಮಾತನಾಡಿದರು‌.

ಈ ವೇಳೆ ಮಾತನಾಡಿದ ಯುವ ಬ್ರಿಗೇಡ್ ವಿಭಾಗ ಸಂಚಾಲಕ ರಾಜು ಪಾಟೀಲ, ಸಾಹಿತ್ಯ, ಗ್ರಂಥಗಳ ಅಧ್ಯಯನ ಮಾಡುವದರಿಂದ ಒಬ್ಬ ಸಾಮಾನ್ಯ ಮನುಷ್ಯ ಅಸಾಮಾನ್ಯ ಸಾಧನೆ ಮಾಡಬಲ್ಲ. ಕೇವಲ ವಿವೇಕಾನಂದರ ವಾಣಿಯಿಂದ ಅಣ್ಣ ಹಜಾರೆ ಇಡಿ ಊರನ್ನ ವ್ಯಸನಮುಕ್ತ ಗ್ರಾಮ ಮಾಡಿದರು, ಇಡಿ ದೇಶಕ್ಕೆ ನಾಯಕರಾಗಿ ಬೆಳೆದರು‌. ವಿವೇಕಾನಂದರ ಅಧ್ಯಯನ ಮತ್ತು ಪ್ರೇರಣೆ ಶಕ್ತಿಯಿಂದ ಎರಡು ಕಾಲುಗಳನ್ನ ಕಳೆದುಕೊಂಡ ಅರುಣಿಮಾ ಸಿನಃ ಜಗತ್ತಿನ ಎತ್ತರದ ಎವರೆಷ್ಟಗಳನ್ನು ಹತ್ತಿ ಮಹಾನ ಸಾಧನೆ ಮಾಡಿದಾಳೆ. ಹಾಗಾಗಿ ಮಹಾನ ವ್ಯಕ್ತಿಗಳ ಚಿರಿತ್ರೆ, ಅಧ್ಯಯನ ಮಾಡುವದರಿಂದ ನಾವು ಕೂಡಾ ಸಾಧನೆಯತ್ತ ಹೆಜ್ಜೆ ಹಾಕಬಲ್ಲೆವು ಎಂದರು.

ಈ ಒಂದು ಕಾರ್ಯಕ್ರಮದ ಸದುಪಯೋಗ ಪಡಿಸಿಕೊಂಡು ಶ್ರೀ ಪರಮಾನಂದ ಭೊಗಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಮಕ್ಕಳ ಈ ಬಾರಿಯ ಎಸ್ಎಸ್ಎಲ್ ಸಿ ಫಲಿತಾಂಶದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆದು ಸಾಧನೆ ಮಾಡುಬೇಕು. ಹಾಗೆ ಸಾಧನೆ ಮಾಡಿದ ಮಕ್ಕಳಿಗೆ ಮಕ್ಕಳ ಸಾಹಿತ್ಯ ಪರಿಷತ್ತಿನ ವತಿಯಿಂದ ಬಹುಮಾನ ವಿತರಿಸಲಾಗುವದು ಎಂದು ಆಲಮೇಲ ತಾಲೂಕ ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಲಕ್ಷ್ಮಿಪುತ್ರ ಕಿರಣಳ್ಳಿ ಹೇಳಿದರು. ಸಂಸ್ಥೆಯ ಅಧ್ಯಕ್ಷರಾದ ಲಾಳಸಂಗಿ, ಜಿಲ್ಲಾ ಸಂಚಾಲಕ ಮಡಿವಾಳ ವಾಲಿಕಾರ, ಪರಶುರಾಮ ಭಜಂತ್ರಿ, ಶಿವರಾಜ ಜೋಗೂರ, ಪ್ರಭಾಕರ ಉಪಸ್ಥಿತರಿದ್ದರು. ಪ್ರಾಚಾರ್ಯರಾದ ರಮೇಶ ಗಂಗನಳ್ಳಿ ನಿರುಪಣೆ ಮಾಡಿದರು.

WhatsApp Group Join Now
Telegram Group Join Now
Share This Article