ಪ್ರಜಾಸ್ತ್ರ ಸುದ್ದಿ
ಬಳ್ಳಾರಿ(Ballari): ಕಾರುಗಳನ್ನು ಬಾಡಿಗೆಗೆ ಪಡೆದು ನಂತರ ಅವುಗಳನ್ನು ಬೇರೆಯವರಿಗೆ ಅಡವಿಟ್ಟ ಘಟನೆ ಜಿಲ್ಲೆಯ ಸಿಂಧನೂರಿನಲ್ಲಿ ನಡೆದಿದೆ. ಎಂ.ಡಿ ಜಹೀದ್ ಭಾಷಾ ಅಲಿಯಾಸ್ ಸೋನು ಎಂಬಾತ ಬರೋಬ್ಬರಿ 200 ಜನರಿಗೆ ಮೋಸ ಮಾಡಿ ಪರಾರಿಯಾಗಿದ್ದಾನೆ. ಕಳೆದ 6 ತಿಂಗಳಲ್ಲಿ ಸ್ನೇಹಿತರ ಮೂಲಕ ಇತರರಿಂದ ಕಾರು ಬಾಡಿಗೆ ಪಡೆದು ನಂತರ ಅವುಗಳನ್ನು ಅಡವಿಟ್ಟಿರುವುದು ಬೆಳಕಿಗೆ ಬಂದಿದೆ.
ಗಾಡಿ ಅಗ್ರಿಮೆಂಟ್ ಮಾಡಿಕೊಂಡು ಕಾರಿನ ಮಾಲೀಕರಿಗೆ ಮೋಸ ಮಾಡಿದ್ದಾನೆ. ಕಾರಿನ ಬಾಡಿಗೆಯನ್ನು ಇತ್ತೀಚೆಗೆ ಕೊಡೆದೆ ಇದ್ದಾಗ ಜೆಪಿಎಸ್ ಮೂಲಕ ಟ್ರೇಸ್ ಮಾಡಿದ್ದಾರೆ. ಆಗ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಬ್ರೂಸ್ ಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.