ಪ್ರಜಾಸ್ತ್ರ ಸುದ್ದಿ
ಡೆಹ್ರಾಡೂನ್(Uttarakhand): ಬಸ್ ವೊಂದು ಕಂದಕಕ್ಕೆ (Bus Fall)ಉರುಬಿದ್ದು ಬರೋಬ್ಬರಿ 23 ಜನರು ಪ್ರಾಣ ಕಳೆದುಕೊಂಡಿದ್ದು, ಅನೇಕರು ಗಾಯಗೊಂಡಿರುವ ಘಟನೆ ಉತ್ತರಾಖಂಡದ ಅಲ್ಮೇರಾ(Almora) ಜಿಲ್ಲೆಯಲ್ಲಿ ನಡೆದಿದೆ. 40 ಪ್ರಯಾಣಿಕರನ್ನು ಕರೆದುಕೊಂಡು ಹೊರಟಿದ್ದ ಬಸ್ 200 ಮೀಟರ್ ಆಳದ ಕಂದಕಕ್ಕೆ ಬಿದ್ದಿದೆ.
ಗರ್ವಾಲ್ ನಿಂದ ಕುಮೌನ್ ಗೆ ಬಸ್ ಹೊರಟಿತ್ತು. ಮರ್ಚೂಲಾ ಹತ್ತಿರ ಬರುತ್ತಿದ್ದಾಗ ಕಂದಕಕ್ಕೆ ಉರುಳಿ ಬಿದ್ದಿದೆ. ಸ್ಥಳೀಯ ರಕ್ಷಣಾ ತಂಡ, ಎಸ್ ಡಿಆರ್ ಎಫ್, ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವ ಕೆಲಸ ನಡೆಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಂತಾಪ ವ್ಯಕ್ತಪಡಿಸಿದ್ದಾರೆ.