Ad imageAd image

ಶ್ರೀ ಆದಿಶೇಷ ಸಂಸ್ಥಾನ ಹಿರೇಮಠದ 29ನೇ ಜಾತ್ರಾಮಹೋತ್ಸವ

Nagesh Talawar
ಶ್ರೀ ಆದಿಶೇಷ ಸಂಸ್ಥಾನ ಹಿರೇಮಠದ 29ನೇ ಜಾತ್ರಾಮಹೋತ್ಸವ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಪಟ್ಟಣದ ಶ್ರೀ ಆದಿಶೇಷ ಸಂಸ್ಥಾನ ಹಿರೇಮಠದ 29ನೇ ಜಾತ್ರಾಮಹೋತ್ಸವದ ನಿಮಿತ್ತ ಜನವರಿ 12ರಿಂದ 22ವರೆಗೆ ಶ್ರೀ ರೇವಣಸಿದ್ದೇಶ್ವರ ಮಹಾಪುರಾಣ ಪ್ರವಚನ ಹಾಗೂ ಜ.23ರಂದು ಬೆಳಿಗ್ಗೆ 9 ಗಂಟೆಗೆ ಶ್ರೀಮದ್ ರಂಭಾಪುರಿ ಜಗದ್ಗುರುಗಳ ಭವ್ಯ ಮೆರವಣಿಗೆ ಮತ್ತು ಬೆಳಿಗ್ಗೆ 11.30 ಗಂಟೆಗೆ ಧರ್ಮಸಭೆ ನಡೆಯಲಿದೆ. ಕಾರಣ ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶ್ರೀ ಆದಿಶೇಷ ಸಂಸ್ಥಾನ ಹಿರೇಮಠದ ನಾಗರತ್ನ ರಾಜಯೋಗಿ ವೀರರಾಜೇಂದ್ರ ಮಹಾಸ್ವಾಮಿಗಳು ಹೇಳಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಶ್ರೀಗಳು, ಜ.12ರಿಂದ 22ರವರೆಗೆ ಸಂಜೆ 6.30ಗಂಟೆಗೆ ಶ್ರೀಮಠದ ಆವರಣದಲ್ಲಿ ಶ್ರೀ ರೇವಣಸಿದ್ದೇಶ್ವರರ ಮಹಾಪುರಾಣ ಪ್ರವಚನ ನಡೆಯಲಿದೆ. 19 ರಂದು ಬೆಳಿಗ್ಗೆ 10 ಗಂಟೆಗೆ ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆ ವತಿಯಿಂದ ಉಚಿತ ಕಣ್ಣಿನ ತಪಾಷಣೆ ಶಿಬಿರ. ಜ.22ರ ಸಂಜೆ ಸದ್ಗುರು ಶಿವಯೋಗಿ ಡಾ.ಚಂದ್ರಶೇಖರ ಮಹಾಸ್ವಾಮಿಗಳು ಜಾಹಗೀರದಾರ ಅವರ 54ನೇ ವರ್ಷದ ಅನುಷ್ಠಾನದ ಸುವರ್ಣ ಮಹೋತ್ಸವ ಹಾಗೂ ಗುರುವಂದನೆ ನಡೆಯಲಿದೆ. ರಾತ್ರಿ 10 ಗಂಟೆಗೆ ಮದ್ದು ಸುಡುವ ಕಾರ್ಯಕ್ರಮ. ಜ.23ರ ಮಧ್ಯಾಹ್ನ 3 ಗಂಟೆಗೆ ಕಲಬುರ್ಗಿಯ ಅದ್ಯುತದ ಬ್ಯಾಂಡ್ ವತಿಯಿಂದ ಆದಿಶೇಷ ಆರಾಧನೆ, ರಾತ್ರಿ 10 ಗಂಟೆಗೆ ಹುಣಚೇರಾಯ ಮುತ್ಯಾ ಮರತೂರ ಇವರಿಂದ  ಭಜನಾ ಮತ್ತು ಶ್ರೀ ಆದಿಶೇಷ ಸಂಸ್ಥಾನ ಹಿರೇಮಠದ ಧ್ವನಿ ಸುರುಳಿ ಮತ್ತು ತ್ರೈಮಾಸಿಕ ಪತ್ರಿಕೆ ಹಾಗೂ ಕ್ಯಾಲೆಂಡರ್ ಬಿಡುಗಡೆ  ಜರುಗುವುದು ಎಂದು ಹೇಳಿದ್ದಾರೆ.

ಜ23ರ ಬೆಳಗಿನ ಬ್ರಾಹ್ಮೀ ಮುಹೂರ್ತದ 5 ಗಂಟೆಗೆ ಆಶ್ಲೇಷ ನಾಗಪೂಜೆ ನಡೆಯಲಿದೆ. ಈ ವೇಳೆ ಕಾಳಸರ್ಪದೋಷ, ಕುಜದೋಷ ಸಮಸ್ಯೆಗಳಿಗೆ ಮುಕ್ತಿ ಕೊಡಲಾಗುತ್ತಿದ್ದು, ಆಸಕ್ತರು ಮುಂಚಿತವಾಗಿ ಶ್ರೀಮಠದಲ್ಲಿ ತಮ್ಮ ಹೆಸರನ್ನು ನೊಂದಾಯಿಸಬೇಕು ಹೆಚ್ಚಿನ ಮಾಹಿತಿಗಾಗಿ 988659 5666, 9916559565 ನಂಬರ್ ಗೆ ಸಂಪರ್ಕಿಸುವಂತೆ ತಿಳಿಸಿದ್ದಾರೆ. ಶ್ರೀಮಠದ ಜಾತ್ರಾ ಮಹೋತ್ಸವ ನಿಮಿತ್ತ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಶ್ರೀಮಠದ ಭಕ್ತರು ಪಾಲ್ಗೊಂಡು ಜಗದ್ಗುರುಗಳ ಆಶೀರ್ವಾದ ಪಡೆದು ಪುನೀತರಾಗಬೇಕು ಎಂದು ಹೇಳಿದ್ದಾರೆ.

WhatsApp Group Join Now
Telegram Group Join Now
Share This Article