ಪ್ರಜಾಸ್ತ್ರ ಸುದ್ದಿ
ಕೋಲಾರ(Kolara): ಕಳೆದ ಸುಮಾರು ಐದು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಉಸ್ಮಾನ್ ಎಂಬಾತ 2ನೇ ಮದುವೆಗೆ ಮುಂದಾಗಿದ್ದಾನೆ. ಹುಡುಗಿಯ ಮನೆಗೆ ಹೋಗಿ ಮಗಳನ್ನು ಕೊಟ್ಟು ಮದುವೆ ಮಾಡಿ ಎಂದು ಕೇಳಿದ್ದಾನೆ. ಆತ ಮನೆಯಿಂದ ಹೊರ ನಂತರ ಆತನನ್ನು ಹಿಂಬಾಲಿಸಿಕೊಂಡು ಹೋಗಿ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಜನರು ಜಮಾಯಿಸುತ್ತಿದ್ದಂತೆ ರಸ್ತೆಬದಿ ಬಿಟ್ಟು ಹೋಗಿದ್ದಾರೆ. ಚಿಕಿತ್ಸೆ ಫಲಿಸದೆ ಆತ ಇದೀಗ ಮೃತಪಟ್ಟಿದ್ದಾನೆ.
ಈ ಬಗ್ಗೆ ಕೋಲಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಪ್ರಕರಣದಡಿಯಲ್ಲಿ ತನಿಖೆ ನಡೆಸಲಾಗುತ್ತಿದೆ. ಉಸ್ಮಾನ್ ಕಳೆದ ಐದು ವರ್ಷಗಳ ಹಿಂದೆ ಜಬೀನ್ ಎನ್ನುವ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಇತ್ತೀಚೆಗೆ ಕಿಡ್ನಿ ಸಮಸ್ಯೆಯಿಂದ ಆಕೆ ಬಳಲುತ್ತಿದ್ದಳು. ಇವಳ ಆರೋಗ್ಯ ವಿಚಾರಿಸಲು ಬಂದ ಸಂಬಂಧಿ ಯುವತಿ ಜೊತೆಗೆ ಉಸ್ಮಾನ್ ಸಲುಗೆ ಬೆಳೆಸಿದ್ದಾನೆ. ಈ ವಿಚಾರ ತಿಳಿದು ಮಹಿಳಾ ಪೊಲೀಸ್ ಠಾಣೆಯಲ್ಲಿ ಪತಿ ವಿರುದ್ಧ ದೂರು ಸಲ್ಲಿಸಿ ತವರು ಮನೆಗೆ ಹೋಗಿದ್ದಾಳೆ.
ಹೀಗಿರುವಾಗ ಕಳೆದ ರಾತ್ರಿ ಉಸ್ಮಾನ್ ಯುವತಿ ಮನೆಗೆ ಹೋಗಿ ಅವರಿಗೆ ಅವಾಜ್ ಹಾಕಿದ್ದಾನಂತೆ. ಮಗಳನ್ನು ಮದುವೆ ಮಾಡಿಕೊಡಿ ಎಂದು ಹೇಳಿದ್ದಾನೆ. ಈ ವೇಳೆ ಒಂದಿಷ್ಟು ಜಗಳವಾಗಿದೆ. ಅಲ್ಲಿಂದ ಆತ ಹೊರಟಿದ್ದಾನೆ. ಆತನನ್ನು ಹುಡುಗಿ ಕಡೆಯವರು ಹಿಂಬಾಲಿಸಿಕೊಂಡು ಹೋಗಿ ನೂರ್ ನಗರ ಸಮೀಪ ಹಿಡಿದು ಹಲ್ಲೆ ಮಾಡಿದ್ದಾರೆ. ಸ್ಥಳೀಯರು ಜಮಾಯಿಸುತ್ತಿದ್ದಂತೆ ಬಿಟ್ಟು ಹೋಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಿಸದೆ ಇದೀಗ ಮೃತಪಟ್ಟಿದ್ದಾನೆ.