ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಸೂಲಿಬೆಲೆಯಲ್ಲಿ ಎಟಿಎಂ ದರೋಡೆ ಮಾಡಲಾಗಿದೆ. ಬೆಡ್ ಶೀಟ್ ಗ್ಯಾಂಗ್ ಎಂದು ಕರೆಯಲಾಗುತ್ತಿರುವ ದರೋಡೆಕೋರರ ತಂಡ ಇಂತಹದೊಂದು ಖರ್ತಾನಕ್ ಕೆಲಸವನ್ನು ಫೆಬ್ರವರಿ 28ರ ಮಧ್ಯರಾತ್ರಿ ಮಾಡಿದೆ. ಕೇವಲ 6 ನಿಮಿಷದಲ್ಲಿ 30 ಲಕ್ಷ ರೂಪಾಯಿಯನ್ನು ಕದ್ದು ಪರಾರಿಯಾಗಿದೆ. ಈ ಮೂಲಕ ಇದೊಂದು ಪಕ್ಕಾ ನುರಿತ ಕಳ್ಳರ ತಂಡವೆಂದು ತಿಳಿದು ಬಂದಿದೆ.
ಕಪ್ಪು ಬಣ್ಣದ ಕ್ರೆಟಾ ಕಾರಿನಲ್ಲಿ ಬಂದ ಕಳ್ಳರು ಇಡೀ ದೇಹಕ್ಕೆ ಬೆಡ್ ಶೀಟ್ ಸುತ್ತಿಕೊಂಡು ಎಟಿಎಂಗೆ ನುಗ್ಗಿದೆ. ನಂತರ ಸಿಸಿಕ್ಯಾಮೆರಾಳಿಗೆ ಸ್ಪ್ರೇ ಹೊಡೆದಿದೆ. ಇದಾದ ಬಳಿಕ ಗ್ಯಾಸ್ ಕಟರ್ ಬಳಸಿ ಎಟಿಎಂ ಮಷಿನ್ ಒಡೆದು 30 ಲಕ್ಷ ರೂಪಾಯಿ ಕಳ್ಳತನ ಮಾಡಿದೆ. ಎಟಿಎಂ ಸೆಕ್ಯೂರಿಟಿ ಹಾಗೂ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ತಿಳಿಸಲಾಗಿದೆ. ದರೋಡೆಕೋರರ ಪತ್ತೆಗೆ ಪೊಲೀಸರ ಕಾರ್ಯಾಚರಣೆ ನಡೆದಿದೆ.