ಪ್ರಜಾಸ್ತ್ರ ಸುದ್ದಿ
ಹಾವೇರಿ(Haveri): ಜಾತ್ರೆ ಸೇರಿದಂತೆ ಹಬ್ಬಗಳ ಸಂದರ್ಭದಲ್ಲಿ ಹಲವು ಕ್ರೀಡೆಗಳನ್ನು ಆಯೋಜಿಸಿಕೊಂಡು ಬರಲಾಗುತ್ತೆ. ಅದರಲ್ಲಿ ಕೆಲವೊಂದಿಷ್ಟು ಸಾಕಷ್ಟು ಕಠಿಣ ಹಾಗೂ ಜೀವಕ್ಕೆ ಹಾನಿಯಾಗುವ ಆಟಗಳು ಇರುತ್ತವೆ. ಅದರಲ್ಲಿ ಹೋರಿ ಬೆದರಿಸುವ ಸ್ಪರ್ಧೆಯೂ ಒಂದು. ಇಂತಹ ಸ್ಪರ್ಧೆಯಲ್ಲಿ 30 ಜನರು ಗಾಯಗೊಂಡ ಘಟನೆ ಹಾವೇರಿ ಜಿಲ್ಲೆಯ ನಾಗೇಂದ್ರನಮಟ್ಟಿಯಲ್ಲಿ ನಡೆದಿದೆ. ರಾಕ್ ಸ್ಟಾರ್ ಹೋರಿಯ ನೆನಪಿಗಾಗಿ ಈ ಸ್ಪರ್ಧೆ ಆಯೋಜಿಸಲಾಗಿತ್ತು.
ಸ್ಪರ್ಧೆಯಲ್ಲಿ 30 ಜನರಿಗೆ ಎದೆ, ಕೈ, ಕಾಲು ಸೇರಿದಂತೆ ದೇಹದ ಹಲವು ಭಾಗಗಳಲ್ಲಿ ಗಾಯಗಳಾಗಿವೆ. ಓರ್ವನ ಕಣ್ಣಿನ ಗುಡ್ಡೆಯೇ ಹೊರ ಬಂದಿದೆ ಎಂದು ಹೇಳಲಾಗುತ್ತಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂತಹ ಸಾಹಸ ಸ್ಪರ್ಧೆಗಳಲ್ಲಿ ಭಾಗವಹಿಸುವಾಗ ಎಷ್ಟೇ ಎಚ್ಚರಿಕೆಯಿದ್ದರೂ ಕಡಿಮೆ ಎನ್ನುವುದು ಮಾತ್ರ ಸತ್ಯ.