Ad imageAd image

ವಿಜಯನಗರ: ಬಸ್ ಪಲ್ಟಿ, 32 ವಿದ್ಯಾರ್ಥಿಗಳಿಗೆ ಗಾಯ

Nagesh Talawar
ವಿಜಯನಗರ: ಬಸ್ ಪಲ್ಟಿ, 32 ವಿದ್ಯಾರ್ಥಿಗಳಿಗೆ ಗಾಯ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಕೂಡ್ಲಗಿ(Kudlagi): ಕೇರಳದ ಕಾಲೇಜುವೊಂದರ ಬಸ್ ಪಲ್ಟಿಯಾಗಿರುವ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಗಿ ತಾಲೂಕಿನ ಅಮ್ಮನಕೇರಿ ಕ್ರಾಸ್ ಹತ್ತಿರದ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ನಡೆದಿದೆ. ಉಪನ್ಯಾಸಕರು ಸೇರಿದಂತೆ 32 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಐವರಿಗೆ ಗಂಭೀರ ಗಾಯಗಳಾಗಿವೆ. ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ.

ಕೇರಳದ ತ್ರಿಶೂರ್ ಜಿಲ್ಲೆಯ ಗುರುವಯೂರಿನ ಶ್ರೀಕೃಷ್ಣ ಕಾಲೇಜಿನ ಓರ್ವ ಪ್ರಾಧ್ಯಾಪಕ ಸೇರಿದಂತೆ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಸೇರಿ 32 ಜನರು ಪ್ರವಾಸ ಕೈಗೊಂಡಿದ್ದರು. ಹಂಪಿ, ದಾಂಡೇಲಿ, ಗೋಕರ್ಣ ಪ್ರವಾಸಕ್ಕೆ ಬಂದಿದ್ದರು. ಮಂಗಳೂರು ತನಕ ರೈಲಿನಲ್ಲಿ ಬಂದಿದ್ದಾರೆ. ಮಂಗಳವಾರ ಸಂಜೆ 6ಕ್ಕೆ ಬಸ್ಸಿನ ಮೂಲಕ ಹಂಪಿಯ ಕಡೆ ಪ್ರಯಾಣ ಬೆಳೆಸಿದ್ದಾರೆ. ಖಾಸಗಿ ಕಂಪನಿಗೆ ಸೇರಿದ ಬಸ್ ಇದಾಗಿದೆ. ವಿದ್ಯಾರ್ಥಿಗಳನ್ನು ಊರಿಗೆ ಕಳಿಸುವ ವ್ಯವಸ್ಥೆ ಮಾಡಲಾಗಿದೆ. ಕೂಡ್ಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
Share This Article