ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕಳೆದೊಂದು ವಾರಕ್ಕಿಂತ ಹೆಚ್ಚು ದಿನಗಳು ಕಬ್ಬು ಬೆಳೆಗಾರರು ನಡೆಸುತ್ತಿದ್ದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಸಕ್ಕರೆ ಕಾರ್ಖಾನೆ ಮಾಲೀಕರು, ರೈತ ಮುಖಂಡರೊಂದಿಗೆ ಸರ್ಕಾರ ಸುದೀರ್ಘವಾಗಿ ಚರ್ಚಿಸಿ, ಪ್ರತಿ ಟನ್ ಕಬ್ಬಿಗೆ 3,300 ರೂಪಾಯಿ ದರ ನಿಗದಿ ಮಾಡಿದೆ. ಈ ಮೂಲಕ ರೈತ ಹೋರಾಟಕ್ಕೆ ಸರ್ಕಾರ ಮಣಿದಿದೆ.
ವಿಧಾನಸೌಧದಲ್ಲಿ ಶುಕ್ರವಾರ ಸುಮಾರು 7 ಗಂಟೆಗಳ ಕಾಲ ಸುದೀರ್ಘ ಮಾತುಕತೆ ನಡೆದಿದೆ. ಈ ಹಿಂದೆ ಕಾರ್ಖಾನೆಗಳಿಂದ ನಿಗದಿಯಾಗಿದ್ದ 3,200 ರೂಪಾಯಿ ಜೊತೆಗೆ ಹೆಚ್ಚುವರಿ 50 ರೂಪಾಯಿ ಹಾಗೂ ಸರ್ಕಾರ ಒಂದು ಅವಧಿಗೆ ಪ್ರೋತ್ಸಾಹಧನವಾಗಿ 50 ರೂಪಾಯಿ ನೀಡಲಿದೆ. ಸಾಗಾಣೆ ಮತ್ತು ಕಟಾವು ವೆಚ್ಚ ಹೊರತುಪಡಿಸಿ ಶೇಕಡ 11.25ರಷ್ಟು ಇಳುವರಿ ಪ್ರಮಾಣ ಇರುವ ಪ್ರತಿ ಟಬ್ ಕಬ್ಬಿಗೆ 3,300 ರೂಪಾಯಿ ಹಾಗೂ ಶೇಕಡ 10.5 ಇಳುವರಿ ಪ್ರಮಾಣ ಇರುವ ಕಬ್ಬಿಗೆ 3,200 ರೂಪಾಯಿ ದರ ನಿಗದಿ ಮಾಡಲಾಗಿದೆ.
ಪರಿಷ್ಕೃತ ದರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಜಿಲ್ಲೆಯಿಂದ ಜಿಲ್ಲೆಗೆ ಇಳುವರಿ ಪ್ರಮಾಣ ವ್ಯತ್ಯಾಸವಾಗುತ್ತೆ ಹೀಗಾಗಿ ಎಲ್ಲ ಇಳುವರಿ ಪ್ರಮಾಣದ ಕಬ್ಬಿಗೆ ಒಂದು ಟನ್ ಗೆ ನೂರು ರೂಪಾಯಿ ಹೆಚ್ಚಳ ಅನ್ವಿಸಲಿದೆ.




