ಪ್ರಜಾಸ್ತ್ರ ಸುದ್ದಿ
ನವದೆಹಲಿ(New Delhi): 2024-25ರಲ್ಲಿ ನಡೆದ ಲೋಕಸಭೆ ಹಾಗೂ 8 ರಾಜ್ಯಗಳ ವಿಧಾನಸಭೆ ಚುನಾವಣೆ ಹಾಗೂ ಉಪ ಚುನಾವಣೆಯಲ್ಲಿ ಬಿಜೆಪಿ ಬರೋಬ್ಬರಿ 3,335.36 ಕೋಟಿ ಚುನಾವಣೆ ವೆಚ್ಚ ಸೇರಿದಂತೆ 3,774.48 ಕೋಟಿ ರೂಪಾಯಿ ಖರ್ಚು ಮಾಡಿದೆ. ಈ ಸಂದರ್ಭದಲ್ಲಿ ಬಿಜೆಪಿ 6,769.14 ಕೋಟಿ ದೇಣಿಗೆ ಸಂಗ್ರಹಿಸಿತ್ತು. ಇದರಲ್ಲಿ 6,124.85 ಕೋಟಿ ದೇಣಿಗೆ ಸ್ವೀಕರಿಸಿದೆ.
ಕಾಂಗ್ರೆಸ್ ಈ ಸಂದರ್ಭದಲ್ಲಿ 896.22 ಕೋಟಿ ರೂಪಾಯಿ ಖರ್ಚು ಮಾಡಿದೆ. ಕಾಂಗ್ರೆಸ್ಸಿಗಿಂತ ಬಿಜೆಪಿ 3.75 ಪಟ್ಟು ಹೆಚ್ಚಳವಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಲೆಕ್ಕ ಪರಿಶೋಧನಾ ವರದಿಯಲ್ಲಿ ಈ ಬಗ್ಗೆ ಉಲ್ಲೇಖಿಸಿದೆ. ಬಿಜೆಪಿ ಜಾಹೀರಾತಿಗಾಗಿ 897.42 ಕೋಟಿ ಖರ್ಚು ಮಾಡಿದೆ. ನಾಯಕರ ಹೆಲಿಕಾಪ್ಟರ್ ಸಂಚಾರಕ್ಕೆ 583.08 ಕೋಟಿ, ಅಭ್ಯರ್ಥಿಗಳಿಗೆ 312.90 ಕೋಟಿ ರೂಪಾಯಿ ನೆರವು ನೀಡಿದೆ. 2,994.56 ಕೋಟಿ ರೂಪಾಯಿ ಉಳಿತಾಯ ಆಗಿದೆ.




