Ad imageAd image

ಡ್ರಾನಲ್ಲಿ ಅಂತ್ಯಗೊಂಡ 3ನೇ ಪಂದ್ಯ

Nagesh Talawar
ಡ್ರಾನಲ್ಲಿ ಅಂತ್ಯಗೊಂಡ 3ನೇ ಪಂದ್ಯ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಗಾಬಾ(Gabba): ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 3ನೇ ಪಂದ್ಯದಲ್ಲಿ ಡ್ರಾ ಆಗಿದೆ. ಮೊದಲ ದಿನ ಮಳೆಗೆ ಆಹುತಿ ಆಯ್ತು. ಉಳಿದ ನಾಲ್ಕು ದಿನ ನಡೆದ ಪಂದ್ಯ ಡ್ರಾನಲ್ಲಿ ಮುಕ್ತಾಯವಾಗಿದೆ. 2ನೇ ಇನ್ನಿಂಗ್ಸ್ ನಲ್ಲಿ 89 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡು ಡಿಕ್ಲೇಯರ್ ಮಾಡಿಕೊಂಡ ಆಸೀಸ್ ಪಡೆ ಭಾರತಕ್ಕೆ 275 ರನ್ ಗಳ ಟಾರ್ಗೆಟ್ ನೀಡಿತು. ಅದಾಗಲೇ ಪಂದ್ಯದ ಫಲಿತಾಂಶ ಎಲ್ಲರಿಗೂ ತಿಳಿದಿತ್ತು. ಭಾರತ 2.1 ಓವರ್ ಗಳಲ್ಲಿ 8 ರನ್ ಗಳಿಸಿತು. ಪಂದ್ಯ ಡ್ರಾ ಕಂಡಿತು.

ಭಾರತ ಪರ ಬೂಮ್ರಾ 3, ಸಿರಾಜ್ ಹಾಗೂ ಆಕಾಶ್ ದೀಪ್ ತಲಾ 2 ವಿಕೆಟ್ ಪಡೆದರು. ಆಸ್ಟ್ರೇಲಿಯಾ ಆಟಗಾರ ಟ್ರಾವಿಸ್ ಹೆಡ್ ಮೊದಲ ಇನ್ನಿಂಗ್ಸ್ ನಲ್ಲಿ ಭರ್ಜರಿ 152 ರನ್, 2ನೇ ಇನ್ನಿಂಗ್ಸ್ ನಲ್ಲಿ 17 ರನ್ ಹಾಗೂ 1 ವಿಕೆಟ್ ಪಡೆದರು. ಹೀಗಾಗಿ ಪ್ಲೇಯರ್ ಆಫ್ ದಿ ಮ್ಯಾಚ್ ಆಗಿ ಹೊರಹೊಮ್ಮಿದರು. ಇದರೊಂದಿಗೆ 1-1 ಸಮಬಲ ಮುಂದುವರೆದಿದೆ.

WhatsApp Group Join Now
Telegram Group Join Now
Share This Article