ಪ್ರಜಾಸ್ತ್ರ ಸುದ್ದಿ
ಲಾರ್ಡ್ಸ್(Loards): ಭಾರತ ಹಾಗೂ ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯ ದಢೀರ್ ನಿಂತಿದೆ. ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಸಮಬಲ ಸಾಧಿಸಿವೆ. ಟಾಸ್ ಗೆದ್ದಿರುವ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿದೆ. 83 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 251 ರನ್ ಗಳಿಸಿದೆ. ಆದರೆ, ದಿಢೀರ್ ಎಂದು ಪಂದ್ಯ ನಿಂತು ಹೋಗಿದೆ. ಕಾರಣ ಅಪಾರ ಪ್ರಮಾಣದಲ್ಲಿ ಲೇಡಿಬಗ್ ಗಳು ಬಂದಿವೆ. ಅಂದರೆ ಸಣ್ಣ ಹಾರುವ ಕೀಟಗಳು.
ಈ ಕಾರಣಕ್ಕೆ ಟೀಂ ಇಂಡಿಯಾ ಬೌಲರ್ ಜಸ್ಪ್ರೀತ್ ಬೂಮ್ರಾ ಅಸಮಾಧಾನ ವ್ಯಕ್ತಪಡಿಸುವ ರೀತಿಯಲ್ಲಿದ್ದರು. ಆಗ ಅಂಪೈರ್ ಹಾಗೂ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಚರ್ಚಿಸಿದರು. ಹೀಗಾಗಿ ಸ್ವಲ್ಪ ಸಮಯದ ತನಕ ಪಂದ್ಯ ನಿಲ್ಲಿಸಲಾಯಿತು. ಜೋ ರೂಟ್ 99, ಬೆನ್ ಸ್ಟೋಕ್ 39 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಜಾಕ್ 18, ಪೊಪೆ 44, ಹ್ಯಾರಿ ಬ್ರೋಕ್ 11, ಬೆನ್ ಡಕೆಟ್ 23 ರನ್ ಗಳಿಸಿ ಔಟ್ ಆಗಿದ್ದಾರೆ. ನಿತೀಶ್ ಕುಮಾರ್ ರೆಡ್ಡಿ 2 ವಿಕೆಟ್ ಪಡೆದಿದ್ದು, ಬೂಮ್ರಾ ಹಾಗೂ ಜಡೇಜಾ ತಲಾ 1 ವಿಕೆಟ್ ಪಡೆದಿದ್ದಾರೆ.