ಪ್ರಜಾಸ್ತ್ರ ಸುದ್ದಿ
ಭುವನೇಶ್ವರ(Bhuvaneshwar): ಲಂಚ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಗಣಿ ಅಧಿಕಾರಿಯ ಮನೆಯಲ್ಲಿ ಬರೋಬ್ಬರಿ 4.27 ಕೋಟಿ ರೂಪಾಯಿ ಪತ್ತೆಯಾಗಿದೆ. ಇದು ಒಡಿಶಾ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳ ದಾಳಿ ನಡೆಸಿ ವಶಪಡಿಸಿಕೊಂಡ ಇದುವರೆಗಿನ ಅಧಿಕ ನಗದು ಆಗಿದೆ. ಗಣಿ ಇಲಾಖೆಯ ಜಂಟಿ ನಿರ್ದೇಶಕ ದೇವವ್ರತ್ ಮೊಹಾಂತಿಯನ್ನು ಮಂಗಳವಾರ ರಾತ್ರಿ ಬಂಧಿಸಲಾಗಿದೆ.
2009ರಲ್ಲಿ ಮೊಹಾಂತಿ ಇದೆ ರೀತಿ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರು. ಮಯೂರ್ ಭಂಜ್ ಜಿಲ್ಲಾ ನ್ಯಾಯಾಲಯದಲ್ಲಿ ಇನ್ನೂ ವಿಚಾರಣೆ ನಡೆಯುತ್ತಿದೆ. ಕಲ್ಲಿದ್ದಲು ಮಾರಾಟಗಾರರೊಬ್ಬರ ಬಳಿ 30 ಸಾವಿರ ರೂಪಾಯಿ ಲಂಚ ಪಡೆಯುವ ವೇಳೆ ಬಂಧಿಸಲಾಗಿತ್ತು. ಕಚೇರಿಯಲ್ಲಿ 1.20 ಲಕ್ಷ ರೂಪಾಯಿ ಪತ್ತೆಯಾಗಿತ್ತು.
ಎರಡು ಅಂತಿಸ್ತಿನ ಮನೆ, 130 ಗ್ರಾಂ ಚಿನ್ನಾಭರಣ, ಒಂದು ಫ್ಯ್ಲಾಟ್, ಬ್ಯಾಂಕ್ ನಲ್ಲಿದ್ದ 10 ಲಕ್ಷ ರೂಪಾಯಿ ಸೇರಿದಂತೆ ಅಪಾರ ಪ್ರಮಾಣದ ಆಸ್ತಿ ಪತ್ತೆಯಾಗಿದೆ. 2004ರಲ್ಲಿ 8 ಸಾವಿರ ರೂಪಾಯಿ ಸಂಬಳಕ್ಕೆ ಕಿರಿಯ ಗಣಿ ಅಧಿಕಾರಿಯಾಗಿ ಸರ್ಕಾರಿ ಕೆಲಸಕ್ಕೆ ಸೇರಿದ ದೇವವ್ರತ್ ಮೊಹಾಂತಿ 20 ವರ್ಷದಲ್ಲಿಯೇ ಕೋಟಿ ಕೋಟಿ ಆಸ್ತಿ ಮಾಡಿದ್ದಾನೆ.




