ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಪಶ್ಚಿಮ ಬಂಗಾಳ, ಗುಜರಾತ್, ಪಂಜಾಬ್ ಹಾಗೂ ಕೇರಳದಲ್ಲಿನ ಕೆಲ ವಿಧಾನಸಭೆಗೆ ನಡೆದ ಉಪ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗುತ್ತಿದೆ. ಈಗಾಗ್ಲೇ ಮತ ಎಣಿಕೆ ಕಾರ್ಯ ನಡೆದಿದೆ. ನಾಲ್ಕು ರಾಜ್ಯಗಳಲ್ಲಿ ಐದು ವಿಧಾನಸಭಾ ಕ್ಷೇತ್ರಗಳಿಗೆ ಕಳೆದ ವಾರ ಉಪ ಚುನಾವಣೆ ನಡೆದಿದೆ. ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರಾನೇರ ಫೈಟ್ ಇದೆ. ಇನ್ನು ಕೆಲವು ಗಂಟೆಗಳಲ್ಲೇ ಫಲಿತಾಂಶ ಹೊರ ಬೀಳಲಿದೆ.